ದಿನಕ್ಕೊಂದು ಪ್ರತಿಭಟನೆ ಸರಿಯಲ್ಲ- ರೈತರನ್ನ ಚರ್ಚೆಗೆ ಆಹ್ವಾನಿಸಿದ ಸಿಎಂ ಬಿಎಸ್ ಯಡಿಯೂರಪ್ಪ…

ಬೆಂಗಳೂರು,ಡಿಸೆಂಬರ್,9,2020(www.justkannada.in):  ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಂದು ರೈತರು ಬಾರುಕೋಲು ಚಳುವಳಿ ಮತ್ತು ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆಗೆ ಮುಂದಾಗಿದ್ದು ಈ ಹಿನ್ನೆಲೆ ಪ್ರತಿಭಟನೆ ಕೈಬಿಡುವಂತೆ ರೈತ ಮುಖಂಡರ ಬಳಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ.logo-justkannada-mysore

 ಮಾಧ್ಯಮಗಳ ಜತೆ ಇಂದು ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ, ದಿನಕ್ಕೊಂದು ಪ್ರತಿಭಟನೆ ಮಾಡುವುದು ಸರಿಯಲ್ಲ, ರೈತರು ಬೆಳೆದ ಉತ್ಪನ್ನಗಳ ಆದಾಯ ಹೆಚ್ಚಿಸಬೇಕಾಗಿದೆ. ರೈತರ ಆದಾಯ ಹೆಚ್ಚು ಮಾಡಲು ಪ್ರಧಾನಿ ಮೋದಿ ಯೋಜನೆ ರೂಪಿಸಿದ್ದಾರೆ.  ರೈತರ ಬಗ್ಗೆ ಕಾಳಜಿ ವಹಿಸಿಯೇ ಪ್ರಧಾನಿ ಮೋದಿ ಕಾಯ್ದೆ ಜಾರಿಗೆ ತಂದಿದ್ದಾರೆ ಎಂದು ಸಮರ್ಥಿಸಿಕೊಂಡರು.protest –farmer-CM BS Yeddyurappa -invited - discussion.

ಹಾಗೆಯೇ ನಿಮಗಿಂತ ನಮಗೆ ರೈತರ ಬಗ್ಗೆ ಹೆಚ್ಚಿನ ಕಾಳಜಿ ಇದೆ. ಹೀಗಾಗಿ ಪ್ರತಿಭಟನೆ ಕೈಬಿಡಿ ಏನಿದ್ದರೂ ಬನ್ನಿ ಕುಳಿತು ಚರ್ಚೆ ಮಾಡೋಣ ಎಂದು ರೈತಮುಖಂಡರನ್ನ ಸಿಎಂ ಬಿಎಸ್ ಯಡಿಯೂರಪ್ಪ ಚರ್ಚೆಗೆ ಆಹ್ವಾನಿಸಿದರು.

Key words:  protest –farmer-CM BS Yeddyurappa -invited – discussion.