ಕಲ್ಲಡ್ಕ ಪ್ರಭಾಕರ್ ವಿರುದ್ಧ ಪ್ರತಿಭಟನೆ: ಮಂಗಳೂರು ವಿವಿಗೆ ಮುತ್ತಿಗೆ ಹಾಕಲು ಸಿಎಫ್ ಐ ಕಾರ್ಯಕರ್ತರ ಯತ್ನ.

Promotion

ಮಂಗಳೂರು,ಮಾರ್ಚ್,30,2022(www.justkannada.in): ಮಂಗಳೂರು ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿ ಪರಿಷತ್ ಉದ್ಘಾಟನೆಗೆ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಅತಿಥಿಯಾಗಿ ಆಹ್ವಾನಿಸಿರುವ ಹಿನ್ನೆಲೆ ಇದನ್ನ ವಿರೋಧಿಸಿ ಸಿಎಫ್ ಐ ಕಾರ್ಯುಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಕಲ್ಲಡ್ಕ ಪ್ರಭಾಕರ್ ಅವರಿಂದ ಮಂಗಳೂರು ವಿವಿ ವಿದ್ಯಾರ್ಥಿ ಪರಿಷತ್ ಉದ್ಘಾಟನೆಗೆ ವಿರೋಧ ವ್ಯಕ್ತಪಡಿಸಿರುವ ಸಿಎಫ್ ಐ ಕಾರ್ಯಕರ್ತರು ಮಂಗಳೂರು ಗೇಟ್ ಎದುರು ನುಗ್ಗಿ ಪ್ರತಿಭಟನೆಗೆ ಮುಂದಾದರು.  ಕಲ್ಲಡ್ಕ ಪ್ರಭಾಕರ್ ಕೋಮು ಪ್ರಚೋದನೆ ಭಾಷಣಕಾರ. ಅವರ ಹೆಸರು ಕೈಬಿಡುವಂತೆ ಆಗ್ರಹಿಸಿದರು.

ಮಂಗಳೂರು ವಿವಿಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾನಿರತ ಸಿಎಫ್ ಐ ಕಾರ್ಯಕರ್ತರನ್ನ ಪೊಲೀಸರು ತಡೆದಿದ್ದು, ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರು ನಡುವೆ ವಾಗ್ವಾದ ನಡೆದು ಹೈಡ್ರಾಮಾ ಸೃಷ್ಟಿಯಾಯಿತು.

Key words: Protest-against-Kalladka Prabhakar-CFI-activists

ENGLISH SUMMARY…

Protest against Kalladka Prabhakar: CPI activists attempt to lay siege to the Mangalore University
Mangaluru, March 30, 2022 (www.justkannada.in): The CPI activists, today staged a demonstration against the RSS leader Kalladka Prabhakar, who visited Mangaluru University to inaugurate the student forum.
The protesters who opposed the visit of Kalladka Prabhakar attempted to rush inside the university campus to express their ire. They alleged Kalladka Prabhakar of spreading hatred and delivering provocative speeches and demanded the University officials not to allow him to enter the campus.
However, the demonstrators were stopped by the police.
Keywords: Mangaluru University/ demonstration/ protest/ CPI activists/ Kalladka Prabhakar