ನಾಡು,ನುಡಿ, ಗಡಿ ರಕ್ಷಣೆಗೆ ಎಲ್ಲರೂ ಬದ್ಧ: ಎಲ್ಲಾ ಪಕ್ಷಗಳಿಂದ ಒಮ್ಮತದ ನಿರ್ಣಯ- ಕೆ.ಎಸ್ ಈಶ್ವರಪ್ಪ.

Promotion

ಶಿವಮೊಗ್ಗ,ಡಿಸೆಂಬರ್,24,2022(www.justkannada.in): ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ನಾಡು ನುಡಿ ಗಡಿ ರಕ್ಷಣೆಗೆ ಎಲ್ಲರೂ ಬದ್ಧರಾಗಿದ್ದೇವೆ.  ಎಲ್ಲಾ ಪಕ್ಷಗಳು ಒಮ್ಮತದ ನಿರ್ಣಯ ತೆಗೆದುಕೊಂಡಿದ್ದೇವೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿಗೆ ಮಹಾರಾಷ್ಟ್ರ ಗಡಿ ಸಲಹಾ ಸಮಿತಿ ಅಧ್ಯಕ್ಷ ಮಾನೆ  ದೂರು ವಿಚಾರ ಕುರಿತು ಪ್ರತಿಕ್ರಿಯಿಸಿದ ಕೆ.ಎಸ್ ಈಶ್ವರಪ್ಪ, ನಾಡು ನುಡಿ ಗಡಿ  ರಕ್ಷಣೆಗೆ ಎಲ್ಲರೂ ಬದ್ಧರಾಗಿದ್ದೇವೆ.   ರಾಜ್ಯದ ಎಲ್ಲಾ ಪಕ್ಷಗಳು ಒಮ್ಮತದ ನಿರ್ಣಯ ತೆಗೆದುಕೊಂಡಿದ್ದೇವೆ.  ಅವರು ಪ್ರಧಾನಿಗಾದರೂ ದೂರು ಕೊಡಲಿ ವಿಶ್ವಸಂಸ್ಥೆಗಾಗದರೂ ದೂರು ನೀಡಲಿ ನಮ್ಮ ನಿರ್ಣಯಕ್ಕೆ ನಾವು ಬದ್ಧ.  ಅಧೀವೇಶನದಲ್ಲಿ ತೆಗೆದುಕೊಂಡ ನಿರ್ಣಯಕ್ಕೆ ಬದ್ಧರಿದ್ದೇವೆ ಎಂದು ತಿಳಿಸಿದರು.

Key words: protecting –nadu-nudi- borders -all parties -consensus decision -KS Eshwarappa.