ಮೈಸೂರು ವಿಭಜಿಸಿ ಹುಣಸೂರು ಹೊಸ ಜಿಲ್ಲೆ ಮಾಡುವ ಪ್ರಸ್ತಾಪ: ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಪ್ರತಿಕ್ರಿಯೆ ಏನು ಗೊತ್ತೆ…..?

Promotion

ಮೈಸೂರು,ಅ,14,2019(www.justkannada.in):  ಮೈಸೂರು ಜಿಲ್ಲೆ ವಿಭಜಿಸಿ ಹುಣಸೂರು ತಾಲ್ಲೂಕನ್ನ ಜಿಲ್ಲೆಯನ್ನಾಗಿ ಮಾಡುವಂತೆ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಸಲ್ಲಿಸಿರುವ ಪ್ರಸ್ತಾಪಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ  ವಿರೋಧ ವ್ಯಕ್ತಪಡಿಸಿದ್ದಾರೆ.

ಮೈಸೂರು ಜಿಲ್ಲೆಯನ್ನ ವಿಭಜಿಸಿ ಹುಣಸೂರು  ತಾಲ್ಲೂಕುನ್ನು ಹೊಸಜಿಲ್ಲೆಯನ್ನಾಗಿ ಮಾಡುವ ಅವಶ್ಯಕತೆ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ  ತಿಳಿಸಿದ್ದಾರೆ

ಮೈಸೂರು  ತಾಲ್ಲೂಕಿನ  ಟಿ.ನರಸೀಪುರದಲ್ಲಿ ನೂತನ ಅಂಬೇಡ್ಕರ್ ಪುತ್ಹಳಿ ಉದ್ಘಾಟನೆ ಕಾರ್ಯಕ್ರಮದಲ್ಲಿ  ಪಾಲ್ಗೊಂಡು ಮಾತನಾಡಿದ  ಮಾಜಿ ಸಿಎಂ ಸಿದ್ಧರಾಮಯ್ಯ, ಮೈಸೂರು ಈಗ 6 ತಾಲ್ಲೂಕುಗಳುನ್ನ ಹೊಂದಿದೆ. ಮಂದೆ 3 ತಾಲ್ಲೂಕಿಗೊಂದು ಜಿಲ್ಲೆ ಮಾಡಲು ಸಾಧ್ಯವಿಲ್ಲ  ಮೈಸೂರಿನಿಂದ  ಕೆಲವೇ ದೂರದಲ್ಲಿ ಹುಣಸೂರು ತಾಲ್ಲೂಕು ಇದೆ, ರಾಜಕೀಯ ಉದ್ದೇಶದಿಂದ ಕೆಲವು ನಾಯಕರು ಜಿಲ್ಲೆ ಮಾಡುವಂತೆ ಹೇಳಿಕೆ ನೀಡಿದ್ದಾರೆ. ಆಡಳಿತಾತ್ಮಕವಾಗಿಯೂ ಇದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.

ಹುಣಸೂರು ಪ್ರತ್ಯೇಕ ಜಿಲ್ಲೆ ಅಗತ್ಯವಿಲ್ಲ. 30 ಕಿ.ಮೀಗೊಂದು ಜಿಲ್ಲೆ ಮಾಡೋಕೆ ಆಗುತ್ತಾ ಎಂದು ಪ್ರಶ್ನಿಸಿದ ಸಿದ್ಧರಾಮಯ್ಯ, ಇದು ವೈಜ್ಞಾನಿಕವಾಗಿಯೂ ಸರಿಯಲ್ಲ. ಇದು ಒಳ್ಳೆಯ ಬೆಳವಣಿಗೆಯೂ ಅಲ್ಲ. ಇದು ವೈಜ್ಞಾನಿಕವಾಗಿಯು ಸರಿಯಲ್ಲ. ಇದು ಒಳ್ಳೆಯ ಬೆಳವಣಿಗೆಯೂ ಅಲ್ಲ. ವೈಯಕ್ತಿಕವಾಗಿ ನನಗೆ ಇಷ್ಟ ಇಲ್ಲ. ನಾನು ವಿಶ್ವನಾಥ್ ಹೇಳಿಕೆಯನ್ನೂ ನೋಡಿಲ್ಲ. ಮಂಜುನಾಥ್ ಹೇಳಿಕೆಯನ್ನೂ ನೋಡಿಲ್ಲ. ಚುನಾವಣೆಗಾಗಿ ಈ ರೀತಿ ಹೇಳಿಕೆ ನೀಡಿರಬಹುದು ಎಂದು ಸಿದ್ಧರಾಮಯ್ಯ ತಿಳಿಸಿದರು.

Key words: Proposal – new district – Hunsur-former CM- siddaramaiah-reaction