” ಮಾಧ್ಯಮಗಳಲ್ಲಿ ಸರಿಗನ್ನಡ ಬಳಕೆ ಅಭಿಯಾನ’’ : ಹಕ್ಕೊತ್ತಾಯ ಪತ್ರ ಸಲ್ಲಿಕೆ…

ಮೈಸೂರು, ಮಾರ್ಚ್,29,2021(www.justkannada.in): ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿ ಅಚ್ಚಳಿಯದೆ ಬೆಳಗಿರುವ ದಿ.  ಆರ್. ಕಲ್ಯಾಣಮ್ಮನವರ ಜನ್ಮದಿನದ ಅಂಗವಾಗಿ 3 ದಿನಗಳ ಕಾಲ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ರಾಜ್ಯಾದಾದ್ಯಂತ  ‘’ಮಾಧ್ಯಮಗಳಲ್ಲಿ ಸರಿಗನ್ನಡ ಬಳಕೆ’’ಅಭಿಯಾನ ಹಮ್ಮಿಕೊಳ್ಳಲಾಗಿದೆ.Government,Social,Economic,Educational,survey,Report,Should,receive,Former CM,Siddaramaiah 

ಕನ್ನಡ ಪತ್ರಿಕೋದ್ಯಮದ ಧೃವ ನಕ್ಷತ್ರ ಆರ್. ಕಲ್ಯಾಣಮ್ಮನವರ 1894  ಮಾರ್ಚ್ 30 ಅವರ ಜನ್ಮದಿನದಂದು ಮಾಧ್ಯಮಗಳಲ್ಲಿ ಸರಿಗನ್ನಡ  ಬಳಕೆ ಕುರಿತಂತೆ ( ಅನುಷ್ಠಾನ  ಕಾರ್ಯಕ್ರಮ ) ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಭಿಯಾನವನ್ನ ನಡೆಸುತ್ತಿದೆ. ಈ ಸಂಬಂಧ ಅದರ ಅಂಗ ಸಂಸ್ಥೆಯಾದ ಕನ್ನಡ ಜಾಗೃತಿ ಸಮಿತಿ ಇಂದು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ  ಜಿಲ್ಲಾ ಪತ್ರಕರ್ತರ ಸಂಘದ ನಗರ ಕಾರ್ಯದರ್ಶಿಗಳಾದ  ಪಿ ರಂಗಸ್ವಾಮಿ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ವೈ.ಡಿ ರಾಜಣ್ಣ ಅವರೊಡನೆ ಹಕ್ಕೊತ್ತಾಯ ಪತ್ರ ಸಲ್ಲಿಸಲಾಯಿತು.

ಕರ್ನಾಟಕದ ಜನ ಕನ್ನಡದ ಪತ್ರಿಕೆ , ಟಿ.ವಿ ಮತ್ತು ರೇಡಿಯೋ ಮಾಧ್ಯಮಗಳನ್ನು ವಸ್ತುನಿಷ್ಠ ಮಾಹಿತಿಗಾಗಿ ಅವಲಂಬಿಸಿರುತ್ತಾರೆ.  ತಮ್ಮ ಕನ್ನಡದ ಓದು ಬರಹ ಕೌಶಲ್ಯಗಳನ್ನು ಸುಧಾರಿಸಿಕೊಳ್ಳಲು ಕನ್ನಡಿಗರು ಕನ್ನಡ ಮಾಧ್ಯಮಗಳನ್ನು ಅನುಸರಿಸಿಸುತ್ತಿದ್ದಾರೆ. ಜನಸಾಮಾನ್ಯರು-ಭಾಷೆ-ಮಾಧ್ಯಮ ಪರಸ್ಪರ ಬೆಸುಗೆಗಾಗಿ , ಬದುಕಿನ ಕೊಂಡಿಯಾಗಿ ನಾಡನ್ನು ಸಮೃದ್ಧಗೊಳಿಸಬೇಕಿದೆ,  ಅದಕ್ಕಾಗಿ ಮಾಧ್ಯಮಗಳ ಸಹಕಾರ ಬಹಳ ಮುಖ್ಯವಾಗಿದೆ.proper-use-kannada-media-campaign-mysore

ಈ ಸಂದರ್ಭದಲ್ಲಿ ಕನ್ನಡ ಜಾಗೃತಿ ಸಮಿತಿ ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ಎ.ಎಸ್ ನಾಗರಾಜ್ , ಸೌಗಂಧಿಕಾ. ವಿ .ಜೋಯಿಸ್ , ಎನ್.ಜಿ‌.ಗಿರೀಶ್ , ಡಾ . ಮುಳ್ಳೂರು ನಂಜುಂಡಸ್ವಾಮಿ , ಅರವಿಂದ್ ಶರ್ಮ ಮತ್ತು ಕನ್ನಡ ಜಾಗೃತಿ ಸಮಿತಿ ಜಿಲ್ಲಾ ಸದಸ್ಯರಾದ ಭೇರ್ಯ ರಾಮಕುಮಾರ್ , ಡಾ.ವಿನೋದಮ್ಮ ಉಪಸ್ಥಿತರಿದ್ದರು.

Key words: Proper- use -kannada- media – campaign-mysore