Saturday, August 15, 2026

BDA Apartments

Home Front Page ಗಣಿ- ಕ್ರಷರ್ ಉದ್ದಿಮೆದಾರರು ಸ್ಪೋಟಕ ಬಳಸಲು 90 ದಿನದೊಳಗೆ ಪರಾವನಗಿ –ಸಚಿವ ಮುರುಗೇಶ್ ನಿರಾಣಿ…

ಗಣಿ- ಕ್ರಷರ್ ಉದ್ದಿಮೆದಾರರು ಸ್ಪೋಟಕ ಬಳಸಲು 90 ದಿನದೊಳಗೆ ಪರಾವನಗಿ –ಸಚಿವ ಮುರುಗೇಶ್ ನಿರಾಣಿ…

ಬೆಂಗಳೂರು,ಮಾರ್ಚ್,29,2021(www.justkannada.in):  ನಷ್ಟದಲ್ಲಿರುವ ಗಣಿ ಮತ್ತು ಕ್ರಷರ್ ಉದ್ಯಮವನ್ನು ಪುನಾರಂಭಗೊಳಿಸುವ ನಿಟ್ಟಿನಲ್ಲಿ ಸ್ಪೋಟಕ ವಸ್ತುಗಳನ್ನು ಬಳಕೆ ಮಾಡಲು ಮಾಲೀಕರಿಗೆ 90 ದಿನದೊಳಗೆ ಲೈಸೆನ್ಸ್(ಪರಾವನಗಿ) ನೀಡುವ ಮಹತ್ವದ ನಿರ್ಧಾರವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ತೆಗೆದುಕೊಂಡಿದೆ.Government,Social,Economic,Educational,survey,Report,Should,receive,Former CM,Siddaramaiah 

ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಂಭವಿಸಿದ ಘಟನೆಯ ನಂತರ ಈ ಉದ್ಯಮ ನಷ್ಟದಲ್ಲಿದ್ದು, ಉದ್ದಿಮೆದಾರರು ಸ್ಪೋಟಕ ವಸ್ತುಗಳನ್ನು ಬಳಕೆ ಮಾಡಲು  ಗಣಿ ಸುರಕ್ಷತಾ ಮಹಾನಿರ್ದೇಶನಾಲಯ(ಡಿಜಿಎಂಎಸ್)90 ದಿನದಲ್ಲಿ ಪರಾವನಗಿ ನೀಡಲು ಹೊಸ ನಿಯಮ ಜಾರಿ ಮಾಡಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

ಸೋಮವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಮುರುಗೇಶ್ ನಿರಾಣಿ, ಈ ಎರಡು ಉದ್ಯಮಗಳು ನಷ್ಟದಲ್ಲಿರುವ ಕಾರಣ ಸರ್ಕಾರದ ಬೊಕ್ಕಸಕ್ಕೆ ಆದಾಯ ಖೋತಾ ಆಗಿದ್ದು, ಸುಮಾರು ರೂ. 300 ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದು ಹೇಳಿದರು.

ಗಣಿ ಹಾಗೂ ಕ್ರಷರ್ ಉದ್ಯಮಕ್ಕೆ  ಸ್ಪೋಟಕ ವಸ್ತುಗಳನ್ನು ಬಳಸುವುದು ಅನಿವಾರ್ಯವಾಗಿದೆ. ಅಭಿವೃದ್ಧಿ ಕಾರ್ಯ ಮುಂದುವರೆಯಬೇಕಾದರೆ ಇದು ಅತ್ಯಗತ್ಯ. ಈಗ ಸ್ಥಗಿತಗೊಂಡಿರುವ ಕಾರಣ ಕಚ್ಚ ವಸ್ತುಗಳ ಬೆಲೆ ಹೆಚ್ಚಳವಾಗಿದ್ದು, ಹೊರ ರಾಜ್ಯದವರು ದುಬಾರಿ ಬೆಲೆಯಲ್ಲಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಉದ್ಯಮ ನಡೆಸುವ ಮಾಲೀಕರು ಇಲಾಖೆಯ ಷರತ್ತು ಮತ್ತು ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. 90 ದಿನದಲ್ಲಿ ಲೈಸೆನ್ಸ್ ಪಡೆಯುವುದಾಗಿ ಷರತ್ತುಪತ್ರಕ್ಕೆ ಸಹಿ ಹಾಕಬೇಕು. ಅಲ್ಲದೆ ಹಾಲಿ ಇರುವ ಲೈಸೆನ್ಸ್ ಹೊಂದಿರುವ ಮಾಲೀಕರ ಜೊತೆ ಒಪ್ಪಂದ ಮಾಡಿಕೊಳ್ಳಬೇಕೆಂದು ಸೂಚನೆ ನೀಡಿದರು.

ಇಂದಿನಿಂದಲೇ ಅನ್ವಯವಾಗುವಂತೆ ಉದ್ದಿಮೆದಾರರು ತಮ್ಮ ಉದ್ಯಮವನ್ನು ಆರಂಭಿಸಬಹುದು. ಪರಾವನಗಿ ನೀಡುವಾಗ  ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಷರತ್ತುಗಳನ್ನು ಒಳಪಡಿಸಿ ನೀಡಬಹುದು ಎಂದು ತಿಳಿಸಿದರು.mine-crusher-licensors-license-within-90-days-minister-murugesh-nirani

ಮಾಲೀಕರು ನಷ್ಟದಲ್ಲಿರುವುದರಿಂದ ಬ್ಯಾಂಕ್‍ ಗಳಿಗೆ ಪ್ರತಿ ತಿಂಗಳು ಸಾಲ ಕಟ್ಟಲು ಸಾಧ್ಯವಾಗುತ್ತಿಲ್ಲ. ಚಟುವಟಿಕೆಗಳು ಸ್ತಬ್ದಗೊಂಡಿರುವ ಕಾರಣ ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ನಿರುದ್ಯೋಗ ಪ್ರಮಾಣ  ಹೆಚ್ಚಾಗುತ್ತದೆ ಎಂದು ಅತಂಕ ವ್ಯಕ್ತಪಡಿಸಿದರು.

ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಷರ್ ಉದ್ಯಮವನ್ನು ಪುನರಾರಂಭೀಸಲು ಇದು ಅನುಕೂಲವಾಗಲಿದೆ ಎಂದು ಮುರುಗೇಶ್ ನಿರಾಣಿ ಅವರು ಹಳಿದರು.

ರಾಜ್ಯದಲ್ಲಿ ಸುಮಾರು 2,500ಕ್ಕೂ ಹೆಚ್ಚು ಕಲ್ಲು ಕ್ವಾರಿ ಗಣಿ ಉದ್ಯಮಗಳಿವೆ. ಇದರಲ್ಲಿ ಶೇ.10ರಷ್ಟು ಮಾತ್ರ ಉದ್ದಿಮೆದಾರರು ಲೈಸೆನ್ಸ್ ಪಡೆದಿದ್ದರೆ, ಶೇ.90ರಷ್ಟು ಮಂದಿ ಲೈಸೆನ್ಸ್ ಪಡೆದಿಲ್ಲ. 2ಕೆಜಿವರೆಗೆ ಸ್ಪೋಟಕಗಳನ್ನು ಬಳಸಲು ಕಾಯ್ದೆಯಲ್ಲಿ ಅವಕಾಶವಿದೆ. 5 ಎಕರೆಗಿಂತ ಕಡಿಮೆ ಜಮೀನನ್ನಲ್ಲಿ ಗಣಿಗಾರಿಕೆ ಮಾಡುವವರಿಗೆ  ಡಿಜಿಎಂಎಸ್ ಪರಾವನಿಯನ್ನು ಕಡ್ಡಾಯ ಮಾಬಾರದೆಂದು ಮನವಿ ಮಾಡಿದ್ದಾರೆ. ಶೀಘ್ರದಲ್ಲೇ ಹೊಸ ಗಣಿಗಾರಿಕೆ ನೀತಿ ಜಾರಿಗೆ ಬರಲಿದೆ. ಇದು  ದೇಶಕ್ಕೆ ಅನ್ವಯವಾಗುವಂತಹ ನೀತಿಯಾಗಲಿದೆ. 10 ಲಕ್ಷದೊಳಗೆ ಮನೆ ಕಟ್ಟುವವರಿಗೆ, ಹಾಗೂ ಪ್ರತಿಯೊಬ್ಬರಿಗೂ ಕೈಗೆಟುವ ದರದಲ್ಲಿ ಮರಳೂ ನೀತಿ ಸೇರಿದಂತೆ ಹತ್ತು ನೀತಿಯನ್ನು ಒಳ್ಳಗೊಳ್ಳಲಿದೆ ಎಂದರು.

ಮಾಜಿ ಸಚಿವ  ರಮೇಶ್ ಜಾರಕಿಹೊಳಿ ಪ್ರಕರಣ ಕುರಿತಂತೆ ಮಾತನಾಡಿದ ಸಚಿವ ನಿರಾಣಿ ಅವರು , ನ್ಯಾಯಾಲಯದಲ್ಲಿ ತಮಗೆ ವಿಶ್ವಾಸವಿದ್ದು ಖಂಡಿತವಾಗಿ ಅವರು ಆರೋಪ ಮುಕ್ತರಾಗಿ ಬರುತ್ತಾರೆ. ನ್ಯಾಯದೇವತೆಯ ತಕ್ಕಡಿ  ಎಲ್ಲರಿಗೂ ಒಂದೇ. ಕಾನೂನಿಗಿಂತ ಯಾರೂ ದೊಡ್ಡವರಲ್ಲ.  ರಮೇಶ್ ಜಾರಕಿಹೊಳಿ ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಹೀಗಾಗಿ ಅವರು ಆರೋಪದಿಂದ ಮುಕ್ತರಾಗಲಿದ್ದಾರೆ. ಪ್ರಕರಣ ತನಿಖೆಯಲ್ಲಿರುವುದರಿಂದ ಈ ಬಗ್ಗೆ  ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಗಣಿ ಅದಾಲತ್

ಗಣಿ ಉದ್ದಿಮೆದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸುವ ನಿಟ್ಟಿನಲ್ಲಿ ಇಲಾಖೆಯು ಏಪ್ರಿಲ್ 17ರಿಂದ  ಜೂ.21ರವರೆಗೆ ರಾಜ್ಯದ 5 ವಿಭಾಗಗಳಲ್ಲಿ ಗಣಿ ಅದಾಲತ್ ನಡೆಸಲಿದೆ.  ಏಪ್ರಿಲ್ 17ರಂದು ಬೆಂಗಳೂರಿನಲ್ಲಿ ಮೊದಲ ಗಣಿ ಅದಾಲತ್ ನಡೆಸಲಾಗುತ್ತಿದೆ. ಇದರಿಂದಾಗಿ ಉದ್ದಿಮೆದಾರರು ಇಲಾಖೆಯಿಂದ ಇಲಾಖೆಗೆ ಅಲೆಯುವುದು ತಪ್ಪಿದಂತಾಗುತ್ತದೆ.

ಸ್ಥಳದಲ್ಲಿಯೇ ಸಮಸ್ಯೆಗೆ ಎಲ್ಲ ಪರಿಹಾರ ಒದಗಲಿದ್ದು, ತ್ವರಿತ ಮತ್ತು ಸುಲಭವಾಗಿ ಉದ್ಯಮವನ್ನು ನಡೆಸಲು  ಅನುಕೂಲವಾಗಲಿದೆ.  ಅದಾಲತ್‍ನಲ್ಲಿ ಕಾನೂನು ಸರಳೀಕರಣ ಮಾಡಲಾಗುವುದು, ಅಕ್ರಮ ಮಾಡಿದರೆ ದಂಡದ ಐದು ಪಟ್ಟು ವಸೂಲಿ ಹಾಗೂ ಪ್ರತಿ ಪ್ರಕರಣವನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿ ಸ್ಥಳದಲ್ಲೇ ಪರಿಹಾರ ಒದಗಿಸುವ ವಿನೂತನ ಯೋಜನೆಯೇ ಗಣಿ ಅದಾಲತ್.

ಸಿಬ್ಬಂದಿಗಳಿಗೆ ಸಮವಸ್ತ್ರ

ಗೃಹ ಮತ್ತು ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿಗಳಿಗೆ ಇರುವಂತೆ ಇನ್ನುಮುಂದೆ ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಸಿಬ್ಬಂದಿಗಳಿಗೂ ಕಡ್ಡಾಯವಾಗಿ ಸಮವಸ್ತ್ರ(ಯೂನಿಫಾರಂ) ಜಾರಿಯಾಗಲಿದೆ.

ಜಿಲ್ಲಾ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಶೀಘ್ರದಲ್ಲೇ ಪೊಲೀಸ್ ಮಾದರಿಯಲ್ಲಿ ಸಮವಸ್ತ್ರವನ್ನು ನೀಡಲಾಗುವುದು. ಗಣಿ ಅಧಿಕಾರಿಗಳಿಗೆ ಅವರ ಸ್ಥಾನಮಾನ(ಗೇಡ್) ಕ್ಕೆ ತಕ್ಕಂತೆ ಸ್ಟಾರ್ ನೀಡಲಾಗುತ್ತದೆ.

ಯಾವುದೆ ಸ್ಥಳದಲ್ಲಾದರೂ ದಿಢೀರನೆ ದಾಳಿ ನಡೆಸುವಾಗ ಸಿಬ್ಬಂದಿಗಳನ್ನು ಕೆಲವರು ಗುರುತಿಸುವುದಿಲ್ಲ. ಕಡೇ ಪಕ್ಷ  ಸಿಬ್ಬಂದಿಗಳಿಗೆ ಸಮವಸ್ತ್ರ ನೀಡಿದರೆ ಗುರುತಿಸಲು ಸುಲಭವಾಗುತ್ತದೆ. ಸದ್ಯದಲ್ಲೇ ಸಿಬ್ಬಂದಿಗಳಿಗೆ ಸಮವಸ್ತ್ರಗಳನ್ನು ಕೊಡಲಾಗುವುದು ಎಂದು ಸಚಿವ ನಿರಾಣಿ ತಿಳಿಸಿದ್ದಾರೆ.

ಇದರ ಜೊತೆಗೆ ನಿವೃತ್ತ ಸೇನಾ ಯೋಧರನ್ನು  ಇಲಾಖೆಯಲ್ಲಿ ಭದ್ರತಾ ಅಧಿಕಾರಿ(ಸೆಕ್ಯೂರಿಟಿ) ನಿಯೋಜನೆ ಮಾಡಿಕೊಳ್ಳುವ ಚಿಂತನೆಯಿದೆ. ಹೊರಗುತ್ತಿಗೆ ಆಧಾರದ ಮೇಲೆ ಬಳ್ಳಾರಿ, ಚಿತ್ರದುರ್ಗ, ಬಾಗಲಕೋಟೆ, ತುಮಕೂರು ಸೇರಿದಂತೆ ಪ್ರತಿ ಜಿಲ್ಲೆಗೆ ಐವರು ಸಿಬ್ಬಂದಿಯನ್ನು ನೇಮಕ ಮಾಡುವುದರ ಜೊತೆಗೆ ಎಲ್ಲಾ ವಾಹನಗಳಿಗೂ ಜಿಪಿಎಸ್ ಅಳವಡಿಕೆ   ಮಾಡಲಾಗುವುದು ಎಂದು ಹೇಳಿದರು.

Key words: Mine – Crusher –Licensors- License- Within -90 Days –Minister- Murugesh Nirani