ಗೋಹತ್ಯೆ ನಿಷೇಧ ವಿಚಾರ: ಪರಿಷತ್ ಸಭೆ ನಡೆಯದೇ ಇದ್ರೆ ಸುಗ್ರೀವಾಜ್ಞೆಗೆ ಚಿಂತನೆ- ಕಾನೂನು ಸಚಿವ ಮಾಧುಸ್ವಾಮಿ….

Promotion

ಬೆಂಗಳೂರು,ಡಿಸೆಂಬರ್,28,2020(www.justkannada.in): ಗೋಹತ್ಯೆ ನಿಷೇಧಕ್ಕೆ ಸುಗ್ರೀವಾಜ್ಞೆ ಹೊರಡಿಸುವ ವಿಚಾರ ಕುರಿತು ಮಾತನಾಡಿರುವ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ, ಪರಿಷತ್ ಸಭೆ ನಡೆಯದೇ ಇದ್ದರೇ ಸುಗ್ರೀವಾಜ್ಞೆಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ವಿಧಾನಪರಿಷತ್ ನಲ್ಲಿ ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರಕ್ಕೆ ಅಡ್ಡಿ ಉಂಟಾದ ಹಿನ್ನೆಲೆ ಸುಗ್ರಿವಾಜ್ಞೆ ಮೂಲಕ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾನೂನು ಸಚಿವ ಮಾಧುಸ್ವಾಮಿ, ಇವತ್ತಿನ ಸಭೆಯಲ್ಲಿ ಯಾವ ನಿರ್ಧಾರ ಆಗುತ್ತೋ ಗೊತ್ತಿಲ್ಲ. ಅಧಿವೇಶನ ಕರೆಯುವ ಸಂಭವ ಇದ್ರೆ ಪುಶ್ ಮಾಡಲ್ಲ. ಪರಿಷತ್ ಸಭೆ ನಡೆಯದೇ ಇದ್ರೆ ಸುಗ್ರೀವಾಜ್ಞೆಗೆ ಚಿಂತನೆ ನಡೆಸುತ್ತೇವೆ ಎಂದರು.prohibition-go-murder-thinking-law-minister-madhuswamy

Key words: Prohibition –Go murder-thinking –  Law Minister- Madhuswamy.