ರಸಾಯನಶಾಸ್ತ್ರ ವಿಜ್ಞಾನಿ ಪ್ರೊ.ಕೆ.ಎಸ್.ರಂಗಪ್ಪ ಅವರಿಗೆ ಬಿ.ಆರ್.ಎಸ್. ಫೆಲೋಶಿಪ್ .

kannada t-shirts

 

ಮೈಸೂರು, ಡಿ.04, 2021 : (www.justkannada.in news ) : ಡೆಹ್ರಾಡೂನ್‌ನ ಸಿಎಸ್ಐಆರ್ – ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ ನಲ್ಲಿ ಬುಧವಾರ (ಡಿ.01) ನಡೆದ BRSI ವಾರ್ಷಿಕ ಸಭೆಯಲ್ಲಿ ಕರ್ನಾಟಕ ರಸಾಯನಶಾಸ್ತ್ರ ವಿಜ್ಞಾನಿ ಪ್ರೊ.ಕೆ.ಎಸ್.ರಂಗಪ್ಪ ಅವರಿಗೆ ಫೆಲೋಶಿಪ್ ಪ್ರಮಾಣಪತ್ರ ಮತ್ತು ಸ್ಮರಣಿಕೆಯನ್ನು ನೀಡಲಾಯಿತು.

ಪ್ರೊಫೆಸರ್ ರಂಗಪ್ಪ ಅವರು 2021 ರ ಬಯೋಟೆಕ್ ರಿಸರ್ಚ್ ಸೊಸೈಟಿ, ಇಂಡಿಯಾ (BRSI) ನ ಫೆಲೋ ಆಗಿ ಆಯ್ಕೆಯಾಗಿದ್ದಾರೆ. ಭಾರತೀಯ ವಿಜ್ಞಾನಿಗಳಿಗೆ ವಿಜ್ಞಾನ ಕ್ಷೇತ್ರದಲ್ಲಿ ಅವರ ಮಹತ್ವದ ಸಂಶೋಧನಾ ಕೊಡುಗೆಗಳನ್ನು ಗುರುತಿಸಿ ಈ ಫೆಲೋಶಿಪ್ ನೀಡಲಾಗುತ್ತದೆ. ಪ್ರೊಫೆಸರ್ ರಂಗಪ್ಪ ಅವರ ಕೆಮಿಕಲ್ಬಯಾಲಜಿ ಮತ್ತು ಮೆಡಿಸಿನಲ್ ಕೆಮಿಸ್ಟ್ರಿ ಕ್ಷೇತ್ರದಲ್ಲಿನ ಸಂಶೋಧನಾ ಕಾರ್ಯ ಗುರುತಿಸಿ ಫೆಲೋಶಿಪ್ ನೀಡಲಾಗಿದೆ.

ಪ್ರಕಟಿತ ಸಂಶೋಧನಾ ಪ್ರಬಂಧಗಳ ಸಂಖ್ಯೆ, ಪೇಟೆಂಟ್‌ಗಳು, ಒಟ್ಟಾರೆ ಉಲ್ಲೇಖಗಳು, h-ಸೂಚ್ಯಂಕ, ಅಂತರಾಷ್ಟ್ರೀಯ ಮಾನ್ಯತೆಗಳು ಮತ್ತು ನಿಯತಾಂಕಗಳನ್ನು ಮೌಲ್ಯಮಾಪನಗಳನ್ನು ಈ ಪ್ರಕ್ರಿಯೆಯಲ್ಲಿ ಪರಿಗಣಿಸಲಾಗುತ್ತದೆ. ಪ್ರೊಫೆಸರ್ ರಂಗಪ್ಪ ಅವರು BRSI ಮಂಡಿಸಿದ ಎಲ್ಲಾ ಸಂಶೋಧನಾ ಮಾನದಂಡಗಳನ್ನು ಪೂರೈಸಿದ್ದು ಮಾತ್ರವಲ್ಲದೆ ಸ್ಪರ್ಧೆಯಲ್ಲಿದ್ದ ಒಟ್ಟು ಎಂಭತ್ತು ವಿಜ್ಞಾನಿಗಳ ಪೈಕಿ ಮೊದಲ ಸ್ಥಾನ ಪಡೆದರು.

BRSI ಯುವ ವಿಜ್ಞಾನಿಗಳನ್ನು ಪೋಷಿಸಲು ಮತ್ತು ವಿಜ್ಞಾನ ಮತ್ತು ಸಮಾಜಕ್ಕೆ ಅವರ ಹಿರಿಯ ವಿಜ್ಞಾನಿಗಳ ಕೊಡುಗೆಗಳನ್ನು ಗುರುತಿಸಲು ಸ್ಥಾಪಿಸಲಾದ ಸಂಶೋಧನಾ ಸಮಾಜವಾಗಿದೆ. ಪ್ರೊಫೆಸರ್ ಸುಧೀರ್ ಸೊಪೊರಿ (ಭಾರತೀಯ ಶಿಕ್ಷಣತಜ್ಞ, ವಿಜ್ಞಾನಿ ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ, ನವದೆಹಲಿ) ಈ ಸಮಾಜದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರೊಫೆಸರ್ ತೇಜ್ ಪಾಲ್ ಸಿಂಗ್ (ಪ್ರಸಿದ್ಧ ಪ್ರಾಧ್ಯಾಪಕ, AIIMS, ನವದೆಹಲಿ) ಅವರಂತಹ ಪ್ರಖ್ಯಾತ ವಿಜ್ಞಾನಿಗಳು ಕಾರ್ಯನಿರ್ವಾಹಕ ಮಂಡಳಿಯಲ್ಲಿ ಕಾರ್ಯನಿರ್ವಾಹಕರಾಗಿದ್ದಾರೆ. ಪ್ರೊಫೆಸರ್ ರಂಗಪ್ಪ ಅವರು 2019 ರಿಂದ ಸತತವಾಗಿ ವಿಶ್ವ ವಿಜ್ಞಾನಿಗಳ ಅಗ್ರ 2% ರಷ್ಟು ಸ್ಥಾನ ಪಡೆದಿದ್ದಾರೆ ಎಂಬುದನ್ನು ಇಲ್ಲಿ ಸ್ಮರಿಸಬಹುದು

 

KEY WORDS :  Professor Rangappa- has been elected as – the Fellow of the Biotech Research Society- BRSI-  for the year 2021.

ENGLISH SUMMARY :

Professor Rangappa has been elected as the Fellow of the Biotech Research Society, India (BRSI) for the year 2021. The fellowship is given to Indian scientists in recognition of their significant research contributions in the field of science. Professor Rangappa has been conferred with the fellowship in recognition of his research work in the area of Chemical Biology and Medicinal Chemistry. The parameters such as the number of published research papers, patents, overall citations, h-index, international recognitions, and many more are considered during the evaluation process. Professor Rangappa fulfilled all the research criteria put forth by BRSI and ranked first among the eighty scientists who were in the competition. He was conferred with a fellowship certificate and a memento in the annual meeting of BRSI held on 1st December 2021 at CSIR – Indian Institute of Petroleum, Dehradun.

BRSI is a research society that was established to nurture young scientists and to recognize senior scientists for their contributions to science and society. Professor Sudhir Sopory (an Indian educationist, scientist, and former vice-chancellor of Jawaharlal Nehru University, New Delhi) is serving as a president of this society where an eminent scientist like Professor Tej Pal Singh (Distinguished Professor, AIIMS, New Delhi) are in the executive body. It can be recalled that Professor Rangappa has been ranked among the top 2% of World Scientists consecutively since 2019.

website developers in mysore