ಇಂದು ಬೆಂಗಳೂರಲ್ಲಿ ಪ್ರೊ ಕಬಡ್ಡಿ ಲೀಗ್ ಗೆ ಅದ್ಧೂರಿ ಚಾಲನೆ

Promotion

ಬೆಂಗಳೂರು, ಡಿಸೆಂಬರ್ 12, 2021 (www.justkannada.in): ಪ್ರೊ ಕಬಡ್ಡಿ ಲೀಗ್ ನ 8 ನೇ ಆವೃತ್ತಿ ಇಂದಿನಿಂದ ಬೆಂಗಳೂರಿನಲ್ಲಿ ಆರಂಭವಾಗಲಿದೆ.

ಈ ಬಾರಿ ಸಂಪೂರ್ಣ ಜೈವ ಸುರಕ್ಷಾ ವಲಯದಲ್ಲಿ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಇಂದು ಬೆಂಗಳೂರು ಬುಲ್ಸ್-ಯು ಮುಂಬಾ ತಂಡವನ್ನು ಎದುರಿಸಲಿದೆ.

ವೈಟ್ ಫೀಲ್ಡ್ ನ ಗ್ರ್ಯಾಂಡ್ ಶರಟಾನ್ ಹೋಟೆಲ್ ನಲ್ಲಿ ಎಲ್ಲಾ ಪಂದ್ಯಗಳು ನಡೆಯುತ್ತಿವೆ. ಪ್ರತೀ ದಿನ ತಲಾ ಮೂರು ಪಂದ್ಯಗಳು ನಡೆಯಲಿವೆ.

ಕೂಟದಲ್ಲಿ ಒಟ್ಟು 12 ತಂಡಗಳು ಭಾಗಿಯಾಗುತ್ತಿದ್ದು, ಜನವರಿ 22 ರವರೆಗೂ ಪಂದ್ಯಗಳು ನಡೆಯಲಿವೆ. ಪವನ್ ಕುಮಾರ್ ಸೆಹ್ರಾವತ್ ನಾಯಕತ್ವದ ಬೆಂಗಳೂರು ಬುಲ್ಸ್ ತಂಡಕ್ಕೆ ಕಿಚ್ಚ ಸುದೀಪ್ ಸಾಥ್ ನೀಡಿದ್ದಾರೆ.