ಖಾಸಗಿ ಶಾಲೆ ಮತ್ತು ಕಾಲೇಜುಗಳನ್ನು ಮಟ್ಟ ಹಾಕಿ : ಮಾಜಿ ಸಚಿವ ಎಚ್.ಡಿ.ರೇವಣ್ಣ ಸಲಹೆ

kannada t-shirts

ಹಾಸನ,ಡಿಸೆಂಬರ್,25,2020(www.justkannada.in) : ಶಾಲಾ ಕಾಲೇಜು ಓಪನ್ ಮಾಡೋ ಮೊದಲು ಖಾಸಗಿ ಶಾಲೆ ಮತ್ತು ಕಾಲೇಜುಗಳನ್ನು ಮಟ್ಟ ಹಾಕಿ. ಒಂದೊಂದು ಶಾಲೆ ಹಾಗೂ ಕಾಲೇಜು  50 ಸಾವಿರದಿಂದ 1 ಲಕ್ಷ ರೂಪಾಯಿವರೆಗೆ ಫೀಸ್ ತಗೊಂಡಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.Teachers,solve,problems,Government,bound,Minister,R.Ashok

ಖಾಸಗಿ ಶಾಲೆಗಳ ಗೊಡ್ಡು ಬೆದರಿಕೆಗೆ ಹೆದರಬೇಡಿ ಎಂದು ಜಿಲ್ಲೆಯಲ್ಲಿ ಭಾರಿ ಶುಲ್ಕ ವಸೂಲಿಗೆ ಇಳಿದ ಶಾಲೆಗಳ ವಿರುದ್ಧ ರೇವಣ್ಣ ಕಿಡಿಕಾರಿದ್ದಾರೆ.

ಶಾಲಾ, ಕಾಲೇಜು ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಅನುದಾನ ಕೊಡಿ ಎಂದು ಈ ಮೂಲಕ, ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಗೆ ಮಣಿಯದೆ ಸರ್ಕಾರಿ ಶಾಲೆ ಸ್ಥಾಪಿಸಿ ಎಂದು ಸಲಹೆ ನೀಡಿದ್ದಾರೆ.

ರಾಜ್ಯದಲ್ಲಿ ಬಿಜೆಪಿ  ಸರ್ಕಾರ ಬಂದ ಬಳಿಕ ಮೈತ್ರಿ ಸರ್ಕಾರ ಮಂಜೂರು ಮಾಡಿದ್ದ ಎಲ್ಲಾ ಕಾಮಗಾರಿಗಳನ್ನು ತಡೆಹಿಡಿಯಲಾಗಿದೆ. ಜಿಲ್ಲೆಯಲ್ಲಿ 6 ಜನ ಜೆಡಿಎಸ್ ಶಾಸಕರಿರೋ ಕಾರಣಕ್ಕೆ ಎಲ್ಲಾ ಕಾಮಗಾರಿ ತಡೆಹಿಡಿಯಲಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.Private-school-Level-Up-Colleges-Former-Minister- H.D.Rewanna-advised

ಕೃಪೆ :internetಬ್ರಿಟಿಷರ ಕಾಲದಲ್ಲಿ ಭೂಸ್ವಾಧೀನ ಆದ ವಿಮಾನ ನಿಲ್ದಾಣದ ಕಾಮಗಾರಿಗೂ ತಡೆ ನೀಡಲಾಗಿದೆ. ಇದಲ್ಲದೆ, ಹಾಸನದ ಆಲೂರು, ಚಿಕ್ಕಮಗಳೂರಿನ ಬೇಲೂರು  ಹಾಸನ ರೈಲ್ವೇ ಮಾರ್ಗದ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಕುಮಾರಸ್ವಾಮಿ ಸಿಎಂ ಆಗಿದ್ದ ಕಾಲದಲ್ಲಿ 462 ಕೋಟಿ ವೆಚ್ಚದ ಕಾಮಗಾರಿಗೆ ಅನುಮೋದನೆ ನೀಡಲಾಗಿತ್ತು ಎಂದು ಆಕ್ರೋಶವ್ಯಕ್ತಪಡಿಸಿದರು.

key words : Private-school-Level-Up-Colleges-Former-Minister- H.D.Rewanna-advised

website developers in mysore