Wednesday, August 12, 2026

BDA Apartments

Home Front Page ಈ ಬಾರಿ ಬಿಜೆಪಿಗೆ ಮೈಸೂರು ಪಾಲಿಕೆ ಮೇಯರ್ ಸ್ಥಾನ ಬೇಕೇ ಬೇಕು-ಸಂಸದ ಪ್ರತಾಪ್ ಸಿಂಹ…

ಈ ಬಾರಿ ಬಿಜೆಪಿಗೆ ಮೈಸೂರು ಪಾಲಿಕೆ ಮೇಯರ್ ಸ್ಥಾನ ಬೇಕೇ ಬೇಕು-ಸಂಸದ ಪ್ರತಾಪ್ ಸಿಂಹ…

ಮೈಸೂರು,ಡಿಸೆಂಬರ್,25,2020(www.justkannada.in): ಮೈಸೂರು ಪಾಲಿಕೆ ಮೇಯರ್ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ,  ಈ ಬಾರಿ ಬಿಜೆಪಿಗೆ ಮೈಸೂರು ಪಾಲಿಕೆ ಮೇಯರ್ ಸ್ಥಾನ ಬೇಕೆ ಬೇಕು. ಮೈಸೂರಿನ ಸಮಗ್ರ ಅಭಿವೃದ್ಧಿ ಆಗಬೇಕೆಂದ್ರೆ ಮೇಯರ್ ಸ್ಥಾನ ನಮಗೆ ಕೊಡಿ ಎಂದಿದ್ದಾರೆ.Teachers,solve,problems,Government,bound,Minister,R.Ashok

ಮೈಸೂರಿನಲ್ಲಿ ಇಂದು ಮಾತನಾಡಿದ ಸಂಸದ ಪ್ರತಾಪ್‌ ಸಿಂಹ,  ನಾವು ಪಾಲಿಕೆಯಲ್ಲಿ ಎಲ್ಲರಿಗಿಂತ ಹೆಚ್ಚು ಸ್ಥಾನಗಳನ್ನ ಗೆದ್ದಿದ್ದೇವೆ. 22 ಸ್ಥಾನ ‌ಇರುವ ನಮಗೆ ಯಾರು ಬೇಕಾದ್ರು ಸಹಕಾರ ಕೊಡಬಹುದು. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಮೈಸೂರು ಪಾಲಿಕೆಯಲ್ಲು ಬಿಜೆಪಿ ನೇತೃತ್ವದ ಅಧಿಕಾರ ಇದ್ರೆ ಅಭಿವೃದ್ಧಿಗೆ ಪೂರಕವಾಗಲಿದೆ. ನಮಗೆ ಒಮ್ಮೆಯೂ ಮೈಸೂರು ಪಾಲಿಕೆ ಮೇಯರ್ ಸ್ಥಾನ ಸಿಕ್ಕಿಲ್ಲ. ಹಿಂದೆ ಜೆಡಿಎಸ್‌ ಜೊತೆ ಹೊಂದಾಣಿಕೆ ಆಗಿದ್ದಾಗ ನಾಲ್ಕು ಬಾರಿ ಉಪಮೇಯರ್ ಮಾತ್ರ ಆಗಿದ್ದೇವೆ. ಈ ಬಾರಿ ಯಾರ ಜೊತೆ ಹೊಂದಾಣಿಕೆ ಆದರೂ ಮೇಯರ್ ಸ್ಥಾನ ನಮಗೇ ಬೇಕು ಎಂದು ಹೇಳಿದ್ದಾರೆ.bjp-mysore-mayor-seat-mp-pratap-simha

ನಿಮಗೆಲ್ಲ ಸಾಕಷ್ಟು ಅವಕಾಶ ಕೊಟ್ಟಾಗಿದೆ. ನಮಗು ಒಮ್ಮೆ ಪಾಲಿಕೆಯಲ್ಲಿ ಮೇಯರ್ ಸ್ಥಾನ ನೀಡಿ ಅವಕಾಶ ಕೊಡಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

Key words: BJP – Mysore-mayor- seat – MP- Pratap Simha