ನ್ಯೂಜಿಲ್ಯಾಂಡ್ ವಿರುದ್ಧ 2ನೇ ಟೆಸ್ಟ್’ಗೆ ಗಾಯಗೊಂಡ ಪೃಥ್ವಿ ಡೌಟ್ ! ಶುಬ್ಮನ್ ಗಿಲ್‌ ಚಾನ್ಸ್ ಸಾಧ್ಯತೆ

Promotion

ಕ್ರೈಸ್ಟ್ ಚರ್ಚ್, ಫೆಬ್ರವರಿ 28, 2020 (www.justkannada.in): ಪೃಥ್ವಿ ಶಾ ಗಾಯದ ಸಮಸ್ಯೆಯಿಂದ ನೆಟ್‌ ಅಭ್ಯಾಸದಿಂದ ಹೊರಗುಳಿದಿದ್ದು, ನ್ಯೂಜಿಲೆಂಡ್‌ ಎದುರಿನ 2ನೇ ಟೆಸ್ಟ್‌ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.

ಪೃಥ್ವಿ ಎಡಗಾಲಿನ ಊತಕ್ಕೆ ಸಿಲುಕಿದ್ದಾರೆ. ಇದರಿಂದ ಶನಿವಾರದಿಂದ ಆರಂಭವಾಗಲಿರುವ ಟೆಸ್ಟ್ ನಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಶಾ ಆಡದಿದ್ದರೆ ಯುವ ಆಟಗಾರ ಶುಬ್ಮನ್ ಗಿಲ್‌ ಟೆಸ್ಟ್‌ ಪದಾರ್ಪಣೆ ಮಾಡುವ ಸಾಧ್ಯತೆ ಇದೆ.

ನೆಟ್ಸ್‌ನಲ್ಲಿ ಶುಬ್ಮನ್ ಗಿಲ್‌ ಸುದೀರ್ಘ‌ ಅಭ್ಯಾಸ ನಡೆಸಿ ಕೋಚ್‌ ರವಿಶಾಸ್ತ್ರಿ ಅವರ ಗಮನ ಸೆಳೆದಿದ್ದಾರೆ. ಶುಬ್ಮನ್ ಗಿಲ್‌ ಆಟವನ್ನು ಸಂಪೂರ್ಣವಾಗಿ ಗಮನಿಸಿದ ಶಾಸ್ತ್ರಿ ಕೆಲವು ಬ್ಯಾಟಿಂಗ್‌ ಸಲಹೆಗಳನ್ನೂ ನೀಡಿದ್ದಾರೆ.