ಮಹಿಳಾ ಟಿ-20 ವಿಶ್ವಕಪ್ ಕ್ರಿಕೆಟ್: ಟೀಂ ಇಂಡಿಯಾಗೆ ಎರಡೇ ಹೆಜ್ಜೆ ಬಾಕಿ !

ಮೆಲ್ಬೋರ್ನ್, ಫೆಬ್ರವರಿ 28, 2020 (www.justkannada.in): ಮಹಿಳಾ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲಿ ರೋಚಕ 3 ರನ್ ಗಳ ಜಯ ಸಾಧಿಸಿದ ಭಾರತ ಇದೀಗ ಚೊಚ್ಚಲ ಟಿ20 ವಿಶ್ವಕಪ್ ಎತ್ತಿ ಹಿಡಿಯುವಂತ ದಾಪುಗಾಲಿಟ್ಟಿದೆ.

ನಿನ್ನೆ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 3 ರನ್ ಗಳಿಂದ ಸೋಲಿಸಿ ಸೆಮಿಫೈನಲ್ ಗೇರಿರುವ ಭಾರತ ಈ ಮೂಲಕ ಈ ವಿಶ್ವಕಪ್ ನಲ್ಲಿ ಸೆಮಿಫೈನಲ್ ಗೇರಿದ ಮೊದಲ ತಂಡವಾಯಿತು.

ವಿಶೇಷವೆಂದರೆ ಇದುವರೆಗೆ ಒಂದೂ ಸೋಲು ಕಾಣದೆ ವನಿತೆಯರು ನಾಕೌಟ್ ಹಂತಕ್ಕೆ ಪ್ರವೇಶಿಸಿದ್ದಾರೆ. ಇದೀಗ ಸೆಮಿಫೈನಲ್ ನಲ್ಲಿ ಯಾವ ತಂಡ ಎದುರಾಳಿಯಾಗಿ ಬರಲಿದೆ ಎಂದು ಕಾದು ನೋಡಬೇಕಿದೆ. ಅದಕ್ಕೂ ಮೊದಲು ನಾಳೆ ಶ್ರೀಲಂಕಾ ವಿರುದ್ಧ ಇನ್ನೊಂದು ಔಪಚಾರಿಕ ಪಂದ್ಯವನ್ನಾಡಬೇಕಿದೆ.