ಕೋವಿಡ್ ಲಸಿಕೆ ಕುರಿತ ಪ್ರಧಾನಿ ಮೋದಿ ಮಹತ್ವದ ಟ್ವೀಟ್

Promotion

ಬೆಂಗಳೂರು, ಜನವರಿ 30, 2022 (www.justkannada.in): ಕೋವಿಡ್ ಲಸಿಕೆ ಕುರಿತು ಪ್ರಧಾನಿ ಮೋದಿ ಇಂದು ಟ್ವೀಟ್ ಮಾಡಿದ್ದಾರೆ.

‘ಎಲ್ಲ ವಯಸ್ಕರಲ್ಲಿ ಶೇಕಡಾ 75 ರಷ್ಟು ಜನರು ಸಂಪೂರ್ಣವಾಗಿ ಲಸಿಕೆ ಹಾಕಿದ್ದಾರೆ. ಈ ಮಹತ್ವದ ಸಾಧನೆಗಾಗಿ ನಮ್ಮ ಸಹ ನಾಗರಿಕರಿಗೆ ಅಭಿನಂದನೆಗಳು’ ಎಂದು ಮೋದಿ ತಿಳಿಸಿದ್ದಾರೆ.

ನಮ್ಮ ಲಸಿಕೆ ಅಭಿಯಾನವನ್ನು ಯಶಸ್ವಿಗೊಳಿಸುತ್ತಿರುವ ಎಲ್ಲರಿಗೂ ಹೆಮ್ಮೆ’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ದೇಶದಲ್ಲಿ ಎಲ್ಲ ವಯಸ್ಕರಲ್ಲಿ ಶೇಕಡಾ 75 ರಷ್ಟು ಜನರು ಸಂಪೂರ್ಣವಾಗಿ ಲಸಿಕೆ ಹಾಕಿದ್ದಾರೆ. ಕೋವಿಡ್ ವಿರುದ್ಧ ಹೋರಾಡಲು ಲಸಿಕೆಯೊಂದೇ ಮಾರ್ಗ. ಇದಕ್ಕಾಗಿ ಸಹಕರಿಸುತ್ತಿರುವ ದೇಶದ ಜನರಿಗೆ ಮೋದಿ ಧನ್ಯವಾದ ತಿಳಿಸಿದ್ದಾರೆ.