ಮನ್ ಕೀ ಬಾತ್ ನಲ್ಲಿ ಮಿಲ್ಖಾಸಿಂಗ್ ಸ್ಮರಿಸಿದ ಪ್ರಧಾನಿ ಮೋದಿ: ಒಲಂಪಿಕ್ಸ್ ನಲ್ಲಿ ಸ್ಪರ್ಧಿಸುತ್ತಿರುವವರಿಗೆ ಶುಭಹಾರೈಕೆ.

ನವದೆಹಲಿ,ಜೂನ್,27,2021(www.justkannada.in):  ಕೊರೊನಾದಿಂದ ಮೃತಪಟ್ಟ ಫ್ಲೈಯಿಂಗ್​ ಸಿಖ್​ ಎಂದೇ ಖ್ಯಾತಿ ಪಡೆದಿರುವ ಮಿಲ್ಖಾ ಸಿಂಗ್‌  ಅವರನ್ನ  ಮನ್​ ಕೀ ಬಾತ್​ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದರು.jk

ಮನ್​ ಕೀ ಬಾತ್​ ನಲ್ಲಿ  ಇಂದು ಮಾತನಾಡಿದ ಪ್ರಧಾನಿ ಮೋದಿ, ಒಲಿಂಪಿಕ್ಸ್​ ಬಗ್ಗೆ ಮಾತನಾಡುವಾಗ, ನಾವೇಕೆ ಮಿಲ್ಖಾ ಸಿಂಗ್ ಅವರನ್ನು ನೆನಪಿಸಿಕೊಳ್ಳುವುದಿಲ್ಲ? ಅವರು ಆಸ್ಪತ್ರೆಗೆ ದಾಖಲಾದಾಗ ಅವರೊಂದಿಗೆ ಮಾತನಾಡಲು ನನಗೆ ಅವಕಾಶ ಸಿಕ್ಕಿತು. ಮಿಲ್ಖಾಸಿಂಗ್ ಅವರ ಸಾಧನೆ ಮರೆಯಲು ಸಾಧ್ಯವಿಲ್ಲ.  ಕೊರೋನಾ ಮಿಲ್ಕಾ ಸಿಂಗ್ ರನ್ನ ನಮ್ಮಿಂದ ಕಿತ್ತುಕೊಂಡಿದೆ. ಮಿಲ್ಖಾ ಸಿಂಗ್ ಇತರರಿಗೆ ಪ್ರೇರಣೆಯಾಗಿದ್ದರು ಎಂದು ತಿಳಿಸಿದರು.

ಟೋಕಿಯೋ ಒಲಂಪಿಕ್​ ತೆರಳುತ್ತಿರುವ ಎಲ್ಲರಿಗೂ ಶುಭಕೋರಿದ ಪ್ರಧಾನಿ ಮೋದಿ  ಒಲಂಪಿಕ್ಸ್ ನಲ್ಲಿ ಸ್ಪರ್ಧಿಸುತ್ತಿರುವವರಿಗೆ ಸೋಷಿಯಲ್ ಮೀಡಿಯಾ ಮೂಲಕ ಪ್ರೋತ್ಸಹಿಒಸಿ  ಚೀರ್ ಫಾರ್ ಇಂಡಿಯಾ ಎಂದು ಹೇಳಿದರು. ಹಾಗೆಯೇ  ಒಲಂಪಿಕ್ ಕ್ವಿಜ್ ನಲ್ಲಿ ಎಲ್ಲರೂ ಭಾಗವಹಿಸಿ ಎಂದು ಕರೆ ನೀಡಿದರು.

ಭಾರತದಲ್ಲಿ ಉಚಿತ ಕೋವಿಡ್ ಲಸಿಕೆ ನೀಡಲಾಗುತ್ತಿದೆ.  ಜೂನ್ 21 ರಂದು ದಾಖಲೆ ಪ್ರಮಾಣದಲ್ಲಿ ಲಸಿಕೆ ನೀಡಲಾಗಿದೆ. ಲಸಿಕಾ ಅಭಿಯಾನದ ಮೂಲಕ ದೇಶದ ಶಕ್ತಿ ಪ್ರದರ್ಶನ ಮಾಡಲಾಗುತ್ತಿದೆ. ಎಲ್ಲರೂ ಕೋವಿಡ್ ಲಸಿಕೆಯ 2 ಡೋಸ್ ಪಡೆಯಿರಿ. ನಾನೂ ಸಹ 2 ಡೋಸ್ ಪಡೆದಿದ್ದೇನೆ. ಎಲ್ಲರೂ ಕೊರೋನಾ ಲಸಿಕೆ ಪಡೆಯುವ ಅಗತ್ಯವಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

Key words:  Prime Minister- Modi –remember- Milkha sing – Man Ki Baat