ಸರ್ಕಾರಿ ಕಾರ್ಯಕ್ರಮಗಳಲ್ಲಿ ‌ನಿರೂಪಕರ ಬದಲಾವಣೆಗೆ ಒತ್ತಾಯ:  ಸಿಎಂ ಮನೆ ಮುಂದೆ ಪ್ರತಿಭಟನೆಗೆ ಕುಳಿತ ಮಹಿಳೆ.

ಬೆಂಗಳೂರು,ಆಗಸ್ಟ್,8,2021(www.justkannada.in): ಸರ್ಕಾರಿ ಕಾರ್ಯಕ್ರಮಗಳಲ್ಲಿ  ‌ನಿರೂಪಕರು ಹಾಗೂ ಗಾಯಕರ ಬದಲಾವಣೆ ಮಾಡಿ ಹೊಸಬರಿಗೆ ಅವಕಾಶ ನೀಡುವಂತೆ ಒತ್ತಾಯಿಸಿ  ಸಿಎಂ ಮನೆ ಮುಂದೆ ಮಹಿಳೆಯೊಬ್ಬರು ಪ್ರತಿಭಟನೆ ನಡೆಸಿದ್ದಾರೆ.

ಕಾರ್ಯಕ್ರಮ ನಿರೂಪಕಿ ಗಿರೀಜಾ ಅವರು ಸಿಎಂ ಮನೆ ಮುಂದೆ ಏಕಾಂಗಿಯಾಗಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಹಳೆ ನಿರೂಪಕರು ಹಾಗೂ ಗಾಯಕರಿಗೆ ಮಣೆ ಹಾಕುತ್ತಿದ್ದಾರೆ. ಸರ್ಕಾರದ ಕಾರ್ಯಕ್ರಮಗಳಲ್ಲಿ ಕೇವಲ ಇಬ್ಬರೇ ನಿರೂಪಕರು. ಹೀಗಾಗಿ ನಿರೂಪಕರು ಹಾಗೂ ಗಾಯಕರ ಬದಲಾವಣೆ ಮಾಡಿ ಹೊಸಬರಿಗೆ ಅವಕಾಶ ನೀಡುವಂತೆ ಆಗ್ರಹಿಸಿದರು.

ನೇರವಾಗಿ ಶಂಕರ್ ಪ್ರಕಾಶ್, ಹಾಗೂ ಅಪರ್ಣಾ ವಿರುದ್ದ ಅಸಮಾಧಾನ ಹೊರ ಹಾಕಿದ ನಿರೂಪಕಿ ಗಿರೀಜಾ, ಹತ್ತು ವರ್ಷದಿಂದ ಅವರೇ ನಿರೂಪಕರಾಗಿದ್ದಾರೆ. ಸರ್ಕಾರ ಬದಲಾಗುತ್ತೆ, ಸಚಿವರು ಬದಲಾಗ್ತಾರೆ ಆದ್ರೆ ಸರ್ಕಾರಿ ಕಾರ್ಯಕ್ರಮದ ನಿರೂಪಕರು ಬದಲಾಗಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು ಪ್ರತಿಭಟನೆಗೆ ಕುಳಿತಿದ್ದ ಗಿರಿಜಾರನ್ನ ಪೊಲೀಸರು ಮನವೊಲಿಸಿ  ಕರೆದೊಯ್ದರು.

ENGLISH SUMMARY….

Women protests in front of CM’s house demanding to change anchors in Govt. programs
Bengaluru, August 8, 2021 (www.justkannada.in): A woman has sat on a dharna in front of the Chief Minister’s house demanding to change the anchors and singers in government programs and give chance to new artistes.
Anchor Girija is the woman who protested expressing her ire. “The government is preferring only old anchors and singers in all its programs. There are only two anchors. Hence, I demand the government to change its attitude and give chance to others also,” she said.
Her ire was against Shankar Prakash and Aparna, who have been given priority in all the government programs for more than 10 years. “Ministers change, and even the governments change, but these anchors won’t change,” she added.
After some time, the police convinced her to withdraw her protest.
Keywords: Girija/ Anchors/ protest/ CM’s residence/

Key words: Pressure – government –programs-Woman –pretest- CM house