ಕ್ರಿಕೆಟ್​ ದೇವರಿಗೆ ಪ್ರತಿಷ್ಠಿತ ಲಾರೆಸ್ ಪ್ರಶಸ್ತಿ ಪ್ರದಾನ

Promotion

ಮುಂಬೈ, ಫೆಬ್ರವರಿ 19, 2020 (www.justkannada.in): ಕ್ರಿಕೆಟ್​ ದೇವರು ಸಚಿನ್ ತೆಂಡೂಲ್ಕರ್ ಅವರು​ ಪ್ರತಿಷ್ಠಿತ ಲಾರೆಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇದರೊಂದಿಗೆ ಆರಾಧ್ಯ ದೈವ ಸಚಿನ್​ ತೆಂಡೂಲ್ಕರ್ ಮುಡಿಗೆ ಮತ್ತೊಂದು ಗರಿ ಸೇರ್ಪಡೆಯದಂತಾಗಿದೆ. 2011 ಯಾವ ಭಾರತೀಯ ಕ್ರಿಕೆಟ್​ ಅಭಿಮಾನಿಯೂ ಮರೆಯಲಾಗದ ವರ್ಷ. ಭಾರತ ಕ್ರಿಕೆಟ್ ಪಾಲಿಗೆ ಸುವರ್ಣ ವರ್ಷ.

ಸುದೀರ್ಘ 28 ವರ್ಷಗಳ ಬಳಿಕ ಕೋಟಿ ಕೋಟಿ ಭಾರತೀಯರ ಕನಸು ನನಸಾದ ವರ್ಷ. ಅಂದು ಧೋನಿ ನೇತೃತ್ವದ ಭಾರತ ತಂಡ ತವರಿನಲ್ಲಿ ನಡೆದ ಏಕದಿನ ವಿಶ್ವಕಪ್​ನ್ನ ಮುಡಿಗೇರಿಸಿಕೊಂಡಿತ್ತು.

ಮುಂಬೈನ ವಾಂಖೆಡೆ ಅಂಗಳದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಧೋನಿ ಪಡೆ 6 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿ ಎರಡನೇ ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು.