ಸಿಗ್ನಲ್ ಜಂಪ್ ಮಾಡಲು ಹೋದ ವೇಳೆ ಖಾಸಗಿ ಬಸ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು…

ಮೈಸೂರು,ಫೆ,19,2020(www.justkannada.in):  ಸಿಗ್ನಲ್ ಜಂಪ್ ಮಾಡಲು ಹೋಗಿ ವ್ಯಕ್ತಿ  ಪ್ರಾಣ ಕಳೆದುಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಆಕಾಶವಾಣಿ ಸಿಗ್ನಲ್ ಬಳಿ ಈ ಘಟನೆ ನಡೆದಿದೆ. ಸಿಗ್ನಲ್ ಜಂಪ್ ಮಾಡಲು ಹೋದ ವೇಳೆ ಮಿನಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಎಸ್.ಎಸ್.ಟೆಕ್ನಾಲಜಿ ಸಂಸ್ಥೆಗೆ ಸೇರಿದ ಮಿನಿ ಬಸ್ ಕೆಆರ್ ಎಸ್ ಕಡೆಯಿಂದ ಬರುತ್ತಿತ್ತು. ಈ ವೇಳೆ  ಬೈಕ್ ಸವಾರ ಸಿಗ್ನಲ್ ಜಂಪ್ ಮಾಡಲು ಯತ್ನಿಸಿದ್ದು ಈ ಸಮಯದಲ್ಲಿ ಬೈಕ್ ಸವಾರನ ತಲೆ ಮೇಲೆ ಬಸ್ ಹರಿದಿದೆ.

ಬೈಕ್ ಸವಾರ ಹೆಲ್ಮೇಟ್ ಧರಿಸದೆ ಬೈಕ್  ಚಾಲನೆ ಮಾಡುತ್ತಿದ್ದ ಎನ್ನಲಾಗಿದೆ. ಮೃತ ದೇಹವನ್ನ ಕೆ.ಆರ್. ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಈ ಕುರಿತು ವಿವಿ ಪುರಂ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: mysore- signal jump- bike rider –death- bus