ಕೊರೊನಾ ಮುನ್ನೆಚ್ಚರಿಕಾ ಕ್ರಮದೊಂದಿಗೆ ಚಾಮರಾಜನಗರದಲ್ಲಿ ಸರಳ ದಸರಾಗೆ ಸಿದ್ಧತೆ

Promotion

ಚಾಮರಾಜನಗರ,16,2020(www.justkannada.in) : ಕೊರೊನಾ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಜಿಲ್ಲಾಡಳಿತದ ವತಿಯಿಂದ ಅ.17ರಿಂದ 20ರವರೆಗೆ ಜಿಲ್ಲಾ ಕೇಂದ್ರದಲ್ಲಿ ಸರಳ ದಸರಾ ಆಚರಿಸಲು ಸಿದ್ದತೆ ನಡೆಸಲಾಗಿದೆ.jk-logo-justkannada-logoಅ.17ರ ಬೆಳಗ್ಗೆ 10.30ಕ್ಕೆ ನಗರದ ಚಾಮರಾಜೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ದಸರಾಗೆ ಜನಪ್ರತಿನಿಧಿಗಳು ಚಾಲನೆ ನೀಡಲಿದ್ದಾರೆ.‌

ವರ್ಚುಯಲ್ ಮೂಲಕ ಕಾರ್ಯಕ್ರಮ ಪ್ರಸಾರPreparing-Simple-Dussehra-Chamarajanagar-Corona-Precautions

ದಸರಾ ಪ್ರಯುಕ್ತ 17 ರಿಂದ 20 ರವರೆಗೆ ಪ್ರತಿದಿನ ಸಂಜೆ 7 ರಿಂದ 8 ರವರೆಗೆ ಚಾಮರಾಜೇಶ್ವರ ದೇವಾಲಯದ ಆವರಣದೊಳಗೆ ಭಕ್ತಿ ಸಂಗೀತ, ಜಾನಪದ ಗೀತೆ ಗಾಯನ, ತಂಬೂರಿ ಪದ, ಸುಗಮ ಸಂಗೀತ ಕಾರ್ಯಕ್ರಮ ಪ್ರಸ್ತುತ ಪಡಿಸಲಿದ್ದು, ವರ್ಚುಯಲ್ ಮೂಲಕ ಕಾರ್ಯಕ್ರಮ ಪ್ರಸಾರ ಮಾಡಲು ಉದ್ದೇಶಿಸಲಾಗಿದೆ.

ಈ ಹಿಂದೆ ಜಿಲ್ಲಾ ದಸರಾ ಕಾರ್ಯಕ್ರಮಗಳಲ್ಲಿ ಪ್ರಖ್ಯಾತ ಗಾಯಕರು, ಹಾಸ್ಯ ಕಲಾವಿದರು ಕಾರ್ಯಕ್ರಮ ನಡೆಸಿಕೊಡುವ ಮೂಲಕ ಮೈಸೂರಿನ ವೈಭವವನ್ನು ಗಡಿಜಿಲ್ಲೆಗೆ ತರುತ್ತಿದ್ದರು. ಈ ಬಾರಿ ಅದಕ್ಕೆ ಅವಕಾಶವಿಲ್ಲದಂತ್ತಾಗಿದೆ.

key words : Preparing-Simple-Dussehra-Chamarajanagar-Corona-Precautions