ಪ್ರೀ ಪ್ಲ್ಯಾನ್  ಮಾಡಿ ಸಿದ್ದರಾಮಯ್ಯ ಅಂಡ್ ಟೀಂ ನನ್ನ ಹೆಸರು ಹಾಳು ಮಾಡಿದ್ರು- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ

Promotion

ಮೈಸೂರು,ಡಿಸೆಂಬರ್,5,2020(www.justkannada.in): ನಾನು ಹಿಂದೆ ಸಿಎಂ ಆಗಿದ್ದಾಗ ಬಂದ ಒಳ್ಳೆಯ ಹೆಸರು ಇತ್ತು. ಆದರೆ ಪ್ರೀ ಪ್ಲ್ಯಾನ್ ಮಾಡಿ ಸಿದ್ದರಾಮಯ್ಯ ಅಂಡ್ ಟೀಂ ನನ್ನ ಹೆಸರು ಹಾಳು ಮಾಡಿದರು. ಕಾಂಗ್ರೆಸ್‌ನಿಂದಲೇ ಎಲ್ಲವೂ ಸರ್ವನಾಶವಾಯಿತು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.logo-justkannada-mysore

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ ಕಾಂಗ್ರೆಸ್ ಮತ್ತು ಸಿದ್ಧರಾಮಯ್ಯ ವಿರುದ್ಧ ಹರಿಹಾಯ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ,  ಎಮೋಷನಲ್ ಟ್ರ್ಯಾಪ್‌ಗೆ ನಾವು ಬಲಿಯಾದೆವು. ಕಾಂಗ್ರೆಸ್ ಜೊತೆ ಕೈ ಜೋಡಿಸಿದ ಕಾರಣ ನಮ್ಮ ಶಕ್ತಿ ಕುಂದಿತು. ಸಿದ್ದರಾಮಯ್ಯ ಅವರ ಅಪಪ್ರಚಾರ ಮಾಡಿದರು. ಪ್ರೀ ಪ್ಲ್ಯಾನ್ ಮಾಡಿ ಸಿದ್ದರಾಮಯ್ಯ ಅಂಡ್ ಟೀಂ ನನ್ನ ಹೆಸರು ಹಾಳು ಮಾಡಿದರು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸೋಲು ಗೆಲವು ಜೆಡಿಎಸ್ ಮೇಲೆ ನಿಂತಿದೆ ಎಂದು ಅವರಿಗೆ ಗೊತ್ತಾಗಿದೆ. ಸಿದ್ದರಾಮಯ್ಯ ಅವರಿಂದ ಕಳೆದ ಬಾರಿ ಬಿಜೆಪಿಗೆ 105 ಸ್ಥಾನ ಬಂತು. ಜೆಡಿಎಸ್ ಬಿಜೆಪಿ ಬಿ ಟೀಂ ಎಂದು ಅಪಪ್ರಚಾರದಿಂದ  ಬಂದಿದೆ. ಸಿದ್ದರಾಮಯ್ಯ ಯಾರನ್ನು ಭೇಟಿ ಮಾಡುತ್ತಾರೆ ನನಗೆ ಗೊತ್ತಿಲ್ಲವಾ ಇತ್ತೀಚೆಗೆ ಯಾರನ್ನು ಭೇಟಿ ಮಾಡಿದ್ದರು ? ನಾನು ಯಾರನ್ನು ಗೌಪ್ಯವಾಗಿ ಭೇಟಿ ಮಾಡಲ್ಲ. ನಾನು ರಾತ್ರಿ ಅಥವಾ ಗುಟ್ಟಾಗಿ ಭೇಟಿಯಾಗುವುದಿಲ್ಲ ಎಲ್ಲರನ್ನೂ ಬಹಿರಂಗವಾಗಿಯೇ ಭೇಟಿ ಮಾಡುತ್ತೇನೆ ಎಂದು ಸಿದ್ಧರಾಮಯ್ಯಗೆ ಟಾಂಗ್ ನೀಡಿದರು.

ಮೈತ್ರಿ ಮಾಡಿಕೊಂಡ ಮೊದಲ ದಿನವೇ ನನ್ನ‌ ಹೆಸರು ಕೆಡುತ್ತಿರುವುದು ಗೊತ್ತಾಯ್ತು. ಆದರೂ ಅವರ ಜೊತೆ ಕೈ ಜೊಡಿಸಿದೆ. 24 ಪಕ್ಷಗಳು ಬಿಜೆಪಿ ವಿರುದ್ದ ಒಂದು ಸಂದೇಶ ನೀಡುವ ಉದ್ದೇಶ ಇತ್ತು. ಇದೆ ಕಾರಣಕ್ಕೆ ಅವರಿಗೆ ಗೌರವ ಕೊಟ್ಟೆ. ಅಧಿಕಾರದಲ್ಲೇ ಉಳಿಯಬೇಕಿದ್ದರೆ ನನಗೆನು ಕಷ್ಟ ಇರಲಿಲ್ಲ. ಇದೊಂದು ಟೆಂಪ್ರವರಿ ಡ್ಯಾಮೆಜ್ ಅಷ್ಟೇ. ಇದನ್ನ ಜನವರಿಯಿಂದ ಸರಿಪಡಿಸಿಕೊಳ್ಳುತ್ತೇನೆ ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು. pre-plan-team-ruined-my-name-siddaramaiah-team-former-cm-hd-kumaraswamy

ಬಿಜೆಪಿ ಜೊತೆ ಸಂಬಂಧ ಇಟ್ಟುಕೊಳ್ಳುವ ಹಾಗಿದ್ರೆ ಇವತ್ತು ಈ ರಾಜ್ಯದಲ್ಲಿ ನಾನೇ ಸಿಎಂ ಆಗಿರ್ತಿದ್ದೆ.

ಬಿಜೆಪಿ ಬಿಜೆಪಿ ಜೊತೆ ಸಂಬಂಧ ಇಟ್ಟುಕೊಳ್ಳುವ ಹಾಗಿದ್ರೆ ಇವತ್ತು ಈ ರಾಜ್ಯದಲ್ಲಿ ನಾನೇ ಸಿಎಂ ಆಗಿರ್ತಿದ್ದೆ. ಕಾಂಗ್ರೆಸ್ ಸಹವಾಸ ಮಾಡಿ 12 ವರ್ಷ ಸಂಪಾದನೆ ಮಾಡಿದ್ದ ಗೌರವ ಹಾಳುಮಾಡಿಕೊಂಡೆ. ದೇವೇಗೌಡರ ಮಾತು ಕಟ್ಟಿಕೊಂಡು ಕಾಂಗ್ರೆಸ್ ಜೊತೆ ಹೋದೆ. ಅವರ ಎಮೋಷನ್‌ ಗೆ ಬೆಲೆ ಕೊಟ್ಟು ಕಾಂಗ್ರೆಸ್ ಜೊತೆ ಕೈ ಸೇರಿಸಿದೆ. ಆದ್ರೆ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯನವರ ಗುಂಪು ಅದನ್ನ ಸರ್ವನಾಶ ಮಾಡಿಬಿಡ್ತು ಎಂದು ಹೆಚ್.ಡಿ ಕುಮಾರಸ್ವಾಮಿ ಗುಡುಗಿದರು.

ಸಿಎಂ ಆಗಿದ್ದ ವೇಳೆ ಕಣ್ಣೀರು ಹಾಕಿದ್ದ ಕುರಿತು ಮಾತನಾಡಿದ ಹೆಚ್.ಡಿ ಕೆ, ನಾನ್ಯಾಕೆ ಒಂದೆ ತಿಂಗಳಲ್ಲಿ ಕಣ್ಣಿರು ಹಾಕಿದೆ ಗೊತ್ತಾ.? ಅವರು ಮಾಡುತ್ತಿದ್ದ ಎಲ್ಲವು ನನಗೆ ಗೊತ್ತಾಗಿ ಕಣ್ಣಿರು ಹಾಕಿದೆ. ಬಿಜೆಪಿಯವರು ನನಗೆ ಆ ಮಟ್ಟಿಗೆ ದ್ರೋಹ ಮಾಡಿರಲಿಲ್ಲ. ಆದರೂ ಕಾಂಗ್ರೆಸ್ ಎಂಎಲ್‌ಎಗಳಿಗೆ 19 ಸಾವಿರ ಕೊಟಿ ಅನುದಾನ ಕೊಟ್ಟಿದೆ. ಇವರು ಮಾತ್ರ ನನಗೆ ಸಹಕಾರ ನೀಡಲಿಲ್ಲ. ಕುಮಾರಸ್ವಾಮಿ ಸಿಎಂ ಆಗಿದ್ರೆ ನಮಗೆ ಸಿಗುತ್ತೆ. ಯಡಿಯೂರಪ್ಪ 6 ತಿಂಗಳು‌ ಸಿಎಂ ಆಗಿದ್ದುಕೊಂಡು ವಾಪಸ್ಸು ಹೋಗ್ತಾರೆ. ಮತ್ತೆ ನಾನೇ ಸಿಎಂ ಆಗುತ್ತೇನೆ ಅಂತ ಕನಸು ಕಂಡಿದ್ದವರು ಈ ಸಿದ್ದರಾಮಯ್ಯ ಎಂದು ಸಿದ್ಧರಾಮಯ್ಯ ವಿರುದ್ಧ ಕಿಡಿಕಾರಿದರು.

English summary…

Siddu and team pre-planned and spoiled my name”: HDK
Mysuru, Dec. 5, 2020 (www.justkannada.in): “I had earned a very good reputation from my hard work when I was the Chief Minister earlier. But Siddaramaiah and team pre-planned and spoiled my name. Everything was destroyed because of Congress,” accused former CM H.D. Kumaraswamy.pre-plan-team-ruined-my-name-siddaramaiah-team-former-cm-hd-kumaraswamy
Addressing a press meet in Mysuru today H.D. Kumaraswamy expressed his displeasure on former CM Siddaramaiah. “We became victims of the emotional trap. Our strength declined because of joining hands with the Congress. Siddaramaiah made anti-propoganda against me. Victory and failure of Congress party in the State is depending on JDS. Siddaramaiah has come to know about this. It is because of him BJP secured 105 seats in the last Assembly elections,” he said.
Keywords: Siddaramaiah/ H. D. Kumaraswamy

Key words:  pre plan – team- ruined- my name- siddaramaiah team-Former CM -HD Kumaraswamy