ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಆರೋಪಿಗಳಿಬ್ಬರನ್ನ ಪೊಲೀಸ್  ಕಸ್ಟಡಿಗೆ ನೀಡಿದ ಕೋರ್ಟ್.

ದಕ್ಷಿಣ ಕನ್ನಡ,ಜುಲೈ,30,2022(www.justkannada.in):  ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಕಸ್ಟಡಿಗೆ  ನೀಡಿ ಕೋರ್ಟ್ ಆದೇಶಿಸಿದೆ.

ಪ್ರವೀಣ್ ಹತ್ಯೆ ನಡೆದ ಒಂದೇ ದಿನಕ್ಕೆ ಝಾಕಿರ್, ಶಫಿಕ್ ಎಂಬ ಆರೋಪಿಗಳನ್ನು ಬಂಧಿಸಲಾಗಿತ್ತು. ಸದ್ಯ ಝಾಕಿರ್ ಮತ್ತು ಶಫಿಕ್ ಇಬ್ಬರು ಆರೋಪಿಗಳನ್ನ  ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ನೀಡುವಂತೆ ಪೊಲೀಸರು ಮನವಿ ಮಾಡಿದ್ದರು.  ಅದರಂತೆ  ಕೋರ್ಟ್ ಆರೋಪಿಗಳನ್ನ ಐದು ದಿನಗಳ ಕಾಲ ಕಸ್ಟಡಿಗೆ ನೀಡಿ ಆದೇಶಿಸಿದೆ. ಸದ್ಯ ಆರೋಪಿಗಳನ್ನು ಗೌಪ್ಯ ಸ್ಥಳದಲ್ಲಿರಿಸಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

ಮಸೂದ್ ಕೊಲೆ ನಡೆದ ಎರಡು ದಿನಗಳ ನಂತರ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ಬೆಳ್ಳಾರೆಯಲ್ಲಿ ಭೀಕರವಾಗಿ ಹತ್ಯೆಗೈಯಲಾಗಿತ್ತು. ಅಂದಿನಿಂದ ಕರಾವಳಿ ಬೂದಿ ಮುಚ್ಚಿದ ಕೆಂಡದಂತಾಗಿತ್ತು. ಅಲ್ಲದೆ ಕಾರ್ಯಕರ್ತನನ್ನು ಕಳೆದುಕೊಂಡು ಕೆರಳಿದ ಕರಾವಳಿ ಬಿಜೆಪಿ ಪಡೆ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರು ಸರ್ಕಾರದ ವಿರುದ್ಧವೇ ಪ್ರತಿಭಟನೆ ನಡೆಸುತ್ತಿದ್ದಾರೆ.

Key words: Praveen Nettaru-murder-case-accused – police -custody.