ಕುಂಕುಮದ ಬಗ್ಗೆ ಮಾತಾಡಿದ್ರೆ ನಾಲಿಗೆ ಸೀಳ್ತೀವಿ- ಪ್ರಮೋದ್ ಮುತಾಲಿಕ್ ಆಕ್ರೋಶ.

Promotion

ಬೆಂಗಳೂರು,ಫೆಬ್ರವರಿ,19,2022(www.justkannada.in): ಹಿಜಾಬ್ ಕೇಸರಿ ಶಾಲು ವಿವಾದದ ಬಳಿಕ ಬಳೆ ಮತ್ತು ಸಿಂಧೂರದ ಬಗ್ಗೆ ಮಾತನಾಡಿದ ಹಿನ್ನೆಲೆ ಶ್ರೀರಾಮಸೇನೆ ಸಂಸ್ಥಾಪಕ  ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಗಲಕೋಟೆಯಲ್ಲಿ  ಮಾತನಾಡಿದ ಪ್ರಮೋದ್ ಮುತಾಲಿಕ್ , ಕುಂಕುಮದ ಬಗ್ಗೆ ಮಾತನಾಡಿದರೇ ನಾಲಿಗೆ ಸೀಳಿಬಿಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.

ಬರೀ ಈಜಾಬ್ ಅಷ್ಟಲ್ಲ.  ಈಗ ಬುರ್ಖ ಹಾಕಿಕೊಂಡು ಬರುತ್ತಿದ್ದಾರೆ ಮುಂದೆ  ನಮಾಜ್ ಮಾಡಲು ಅವಕಾಶ ಕೇಳ್ತಾರೆ.  ಹಣೆಯ ಮೇಲೆ ಕುಂಕುಮ ಹಾಕೋದು ದೇಶದ ಸಂಸ್ಕೃತಿ.  ಗಣೇಶ ಪೂಜೆ ಸರಸ್ವತಿ ಪೂಜೆ ದೇಶದ ಸಂಸ್ಕೃತಿ. ಕುಂಕುಮ ಬಗ್ಗೆ ಮಾತಾಡಿದ್ರೆ ನಾಲಿಗೆ ಸೀಳ್ತೀವಿ ಎಂದರು.

ಸಿಎಫ್ ಐ  ಮತ್ತು ಪಿಎಫ್ ಐ ಸಂಘಟನೆ ದೇಶದ್ರೋಹಿ ಚಟುವಟಿಕೆಯಲ್ಲಿ ತೊಡಗಿವೆ ಪಿಎಫ್ ಐ ದೇಶದಲ್ಲಿ ದೊಡ್ಡ ರಾಕ್ಷಸರೂಪವಾಗಿ ಕಂಟಕವಾಗಿದೆ ಪಿಎಫ್ ಐ ಮತ್ತು ಸಿಎಫ್ ಐ ನಿಷೇಧಿಸಲು ಬಿಜೆಪಿ ಸರ್ಕಾರಕ್ಕೆ ಏನಾಗಿದೆ. ಇವುಗಳನ್ನ ನಿಷೇಧಿಸದಿದ್ದರೇ ನಿಮ್ಮನ್ನ ನುಂಗಿ ಹಾಕುತ್ತವೆ ಎಂದು ಎಚ್ಚರಿಕೆ ನೀಡಿದರು.

Key words: Pramod Muthalik-hijab-controversy