ವಿದ್ಯುತ್ ಖಾಸಗೀಕರಣಕ್ಕೆ ವಿರೋಧಿಸಿ ಮೈಸೂರಿನಲ್ಲಿ ನೌಕರರಿಂದ ಕೈಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ….

ಮೈಸೂರು,ಜೂ,1,2020(www.justkannada.in): ಕೇಂದ್ರ ಸರ್ಕಾರವು  ವಿದ್ಯುತ್ ಕಾಯ್ದೆ 2020ಅನ್ನು ತಿದ್ದುಪಡಿ ಹಾಗೂ ಖಾಸಗೀಕರಣ ಮಾಡಲು ಹೊರಟಿರುವುದನ್ನ ಖಂಡಿಸಿ  ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ವತಿಯಿಂದ ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದರು. power –privatization- Mysore -employees -protest

‌ಮೈಸೂರಿನ ಎಂಪಿಎಲ್ ಆವರಣದಲ್ಲಿ ನೂರಾರು ನೌಕರರು ಸೇರಿ ಕೈಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ಕೆಲಸಕ್ಕೆ ಹಾಜರಾಗಿ ನೌಕರರು ಧರಣಿ ನಡೆಸಿದರು. ಕೂಡಲೇ ಈ ಕಾಯ್ದೆ ತಿದ್ದುಪಡಿಯನ್ನ ಕೈಬಿಡಬೇಕು. ಖಾಸಗೀಕರಣದಿಂದ ನಮಗೆ ಹಾಗೂ ಸರ್ಕಾರಕ್ಕೆ ತೊಂದರೆ ಆಗುತ್ತದೆ. ಇದರಿಂದ ಎಲ್ಲಾ ರೈತಾಪಿ ವರ್ಗಕ್ಕೆ ತೊಂದರೆ ಆಗುತ್ತೆ. ಆದ್ದರಿಂದ ಕೇಂದ್ರ ಸರ್ಕಾರ ಈ ತೀರ್ಮಾನವನ್ನ ಕೈಬಿಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

Key words: power –privatization- Mysore -employees -protest