ಮೈಸೂರು ವಿವಿಯಿಂದ ಕೆ-ಸೆಟ್ ಪರೀಕ್ಷೆ ಮತ್ತೆ ಮುಂದೂಡಿಕೆ…

Promotion

ಮೈಸೂರು,ಏಪ್ರಿಲ್,21,2021(www.justkannada.in): ಏಪ್ರಿಲ್ 25 ರಂದು ನಿಗದಿಯಾಗಿದ್ದ  ಕೆ-ಸೆಟ್ ಪರೀಕ್ಷೆಯನ್ನ ಮತ್ತೆ ಮುಂದೂಡಿಕೆ ಮಾಡಿ ಮೈಸೂರು ವಿಶ್ವ ವಿದ್ಯಾನಿಲಯ ಆದೇಶಿಸಿದೆ.postponement-k-set-exam-mysore-university

ರಾಜ್ಯದಲ್ಲಿ ಕೊರೋನಾ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನೈಟ್ ಕರ್ಫ್ಯೂ ಮತ್ತು ವಾರಾಂತ್ಯದಲ್ಲಿ ಕರ್ಫ್ಯೂವನ್ನು ರಾಜ್ಯ ಸರ್ಕಾರ ಘೋಷಿಸಿದೆ. ಹೀಗಾಗಿ ಏಪ್ರಿಲ್ 25 ಭಾನುವಾರ ನಿಗದಿಯಾಗಿದ್ದ ಕೆ-ಸೆಟ್ ಪರೀಕ್ಷೆಯನ್ನ ಮುಂದೂಡಿಕೆ ಮಾಡಿ ಮೈಸೂರು ವಿವಿ ಸಂಯೋಜನಾಧಿಕಾರಿ ಪ್ರೊ. ಹೆಚ್. ರಾಜಶೇಖರ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಮುಂದಿನ ದಿನಗಳಲ್ಲಿ ಕೆ-ಸೆಟ್ ಪರೀಕ್ಷಾ ದಿನಾಂಕ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಕೆಸೆಟ್ ಪರೀಕ್ಷೆ ಎರಡು ಬಾರಿ ಮುಂದೂಡಿಕೆಯಾದಂತಾಗಿದೆ.

Key words: Postponement – K-set -exam- Mysore university