ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಸಿಎಂ ಉದ್ಧವ್ ಠಾಕ್ರೆಗೆ ರೆಬಲ್ ಶಾಸಕರಿಂದ ಪತ್ರ.

ಮುಂಬೈ,ಜೂನ್,23,2022(www.justkannada.in): ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿದ್ದು, ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಪತನವಾಗುವ ಸಾಧ್ಯತೆ ಇದೆ. ಈ ಮಧ್ಯೆ ಸರ್ಕಾರದ ವಿರುದ್ಧ ಏನಕಾಥ್ ಸಿಂಧೆ ನೇತೃತ್ವದಲ್ಲಿ ರೆಬಲ್ ಶಾಸಕರು ಬಂಡೆದ್ದು ಗುಜರಾತ್ ಗೆ ತೆರಳಿದ್ದಾರೆ.

ಇನ್ನು ರೆಬಲ್ ಶಾಸಕರು ಸಿಎಂ ಉದ್ಧವ್ ಠಾಕ್ರೆಗೆ ಇದೀಗ ಪತ್ರವೊಂದನ್ನ ಬರೆದಿದ್ದು, ಶಾಸಕರ ಭೇಟಿಗೆ ಅವಕಾಶ ಕೊಡುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ಮನೆಬಾಗಿಲು ಸಂಪೂರ್ಣವಾಗಿ ಮುಚ್ಚಿತ್ತು. ಕಳೆದ ಎರಡುವರೆ ವರ್ಷದಿಂದ ಬಾಗಿಲು ಮುಚ್ಚಿದ್ದವು. ಶಿವಸೇನಾ ಶಾಸಕರಾಗಿದ್ದ ನಮಗೆ ಬಾಗಿಲು ಮುಚ್ಚಿತ್ತು.  ಸಿಎಂ ಸಾಹೇಬರನ್ನ ಭೇಟಿ ಮಾಡಲು ಹರಸಾಹಸ ಪಡುತ್ತಿದ್ದವು.

ಸಿಎಂ ಮನೆ ಗೇಟ್ ಬಳಿಯೆ ನಿಂತು ಸಮಸ್ಯೆ ಹೇಳಬೇಕಿತ್ತು. ಎಷ್ಟೋ ಸಲ ಮನೆ ಬಳಿ ಕರೆ ಮಾಡಿದ್ರೆ  ಸ್ವೀಕರಿಸುತ್ತಿರಲಿಲ್ಲ.  ಕೊನೆಗೆ ಬೇಸರ ಮಾಡಿಕೊಂಡು ಹೊರಟು ಹೋಗುತ್ತಿದ್ದವು. ಮೂರ್ನಾಲ್ಕು ಲಕ್ಷ ಮತದಾರರಿಂದ ಚುನಾಯಿತರಾಗಿದ್ದೇವೆ. ನಮ್ಮ ಶಾಸಕರನ್ನ ಈ ರೀತಿ ಅವಮಾನಿಸಿದ್ದು ಯಾಕೆ..? ಎಂದು ರೆಬಲ್ ಶಾಸಕರು ಪತ್ರದಲ್ಲಿ ಪ್ರಶ್ನಿಸಿದ್ದಾರೆ.

Key words:  political -crisis –Maharashtra-Letter -Rebel MLA -CM Uddhav Thackeray