ಪಿಎಫ್ ಐ ಮೇಲೆ ಪೊಲೀಸರು ದಾಳಿ ನಡೆಸಿಲ್ಲ: ಇದು ಮುನ್ನೆಚ್ಚರಿಕೆ ಕ್ರಮ- ಸಿಎಂ ಬೊಮ್ಮಾಯಿ.

Promotion

ಬೆಂಗಳೂರು,ಸೆಪ್ಟಂಬರ್,27,2022(www.justkannada.in):  ಪಿಎಫ್​ ಐ ಮತ್ತು ಎಸ್​ಡಿಪಿಐ  ಮುಖಂಡರ ನಿವಾಸದ ಮೇಲೆ ಪೊಲೀಸ್  ನಡೆಸಿರುವುದು ದಾಳಿ ಅಲ್ಲ, ಇದು ನಮ್ಮ ಪೊಲೀಸರು ಮುನ್ನೆಚ್ಚರಿಕೆಯಿಂದ ನಡೆಸಿರುವ ಕಾರ್ಯಾಚರಣೆ  ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಾಧ್ಯಮದ ಜೊತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ತಹಶೀಲ್ದಾರ್ ಮೂಲಕವೇ ಪೊಲೀಸರು ಕಾನೂನಾತ್ಮಕವಾಗಿ ಅಗತ್ಯ ಕ್ರಮ ಜರುಗಿಸಿದ್ದಾರೆ. ಕರ್ನಾಟಕವಷ್ಟೇ ಅಲ್ಲ, ಇತರ ರಾಜ್ಯಗಳಲ್ಲಿಯೂ ಇಂಥ ಕಾರ್ಯಾಚರಣೆಗಳು ನಡೆಯುತ್ತಿವೆ. ಪೊಲೀಸರಿಗೆ ವಿವಿಧೆಡೆಯಿಂದ ಹತ್ತು ಹಲವು ಮಾಹಿತಿ ಬಂದಿರುತ್ತವೆ ಎಂದು  ತಿಳಿಸಿದರು.

Key words: Police -did not -raid –PFI- precautionary- action- CM Bommai.