ಬೆಂಗಳೂರು,ಸೆಪ್ಟಂಬರ್,27,2022(www.justkannada.in): ಪಿಎಫ್ ಐ ಮತ್ತು ಎಸ್ಡಿಪಿಐ ಮುಖಂಡರ ನಿವಾಸದ ಮೇಲೆ ಪೊಲೀಸ್ ನಡೆಸಿರುವುದು ದಾಳಿ ಅಲ್ಲ, ಇದು ನಮ್ಮ ಪೊಲೀಸರು ಮುನ್ನೆಚ್ಚರಿಕೆಯಿಂದ ನಡೆಸಿರುವ ಕಾರ್ಯಾಚರಣೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.![]()
ಮಾಧ್ಯಮದ ಜೊತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ತಹಶೀಲ್ದಾರ್ ಮೂಲಕವೇ ಪೊಲೀಸರು ಕಾನೂನಾತ್ಮಕವಾಗಿ ಅಗತ್ಯ ಕ್ರಮ ಜರುಗಿಸಿದ್ದಾರೆ. ಕರ್ನಾಟಕವಷ್ಟೇ ಅಲ್ಲ, ಇತರ ರಾಜ್ಯಗಳಲ್ಲಿಯೂ ಇಂಥ ಕಾರ್ಯಾಚರಣೆಗಳು ನಡೆಯುತ್ತಿವೆ. ಪೊಲೀಸರಿಗೆ ವಿವಿಧೆಡೆಯಿಂದ ಹತ್ತು ಹಲವು ಮಾಹಿತಿ ಬಂದಿರುತ್ತವೆ ಎಂದು ತಿಳಿಸಿದರು.
Key words: Police -did not -raid –PFI- precautionary- action- CM Bommai.






