ಪ್ರಧಾನಿ ಮೋದಿ ಪ್ರವಾಸದಿಂದ ರಾಜ್ಯದಲ್ಲಿ  ಬಿಜೆಪಿ ಪರ ಒಲವು ಹೆಚ್ಚಳ- ಸಿಎಂ ಬೊಮ್ಮಾಯಿ.

Promotion

ಹುಬ್ಬಳ್ಳಿ,ಮಾರ್ಚ್,13,2023(www.justkannada.in): ಪ್ರಧಾನಿ ನರೇಂದ್ರ ಮೋದಿ ಪ್ರವಾಸದಿಂದ ರಾಜ್ಯದಲ್ಲಿ  ಬಿಜೆಪಿ ಪರ ಒಲವು ಹೆಚ್ಚಳವಾಗಿದೆ ಎಂದು  ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕರ್ನಾಟಕದಲ್ಲಿ ಮೋದಿ ಸುನಾಮಿ ಶುರುವಾಗಿದೆ. ಮೋದಿ ರಾಜ್ಯದ ಹಲವೆಡೆ ಪ್ರಚಾರ ಮಾಡಿದ್ದಾರೆ. ಮೋದಿ ಪ್ರವಾಸದಿಂದ ಬಿಜೆಪಿ ಪರ ಒಲವು ಹೆಚ್ಚಾಗಿದೆ ಎಂದರು.

ರೌಡಿ ಶೀಟರ್ , ಫೈಟರ್ ರವಿಗೆ ಮೋದಿ ನಮಸ್ಕಾರ ಮಾಡಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ,  ಸಾರ್ವಜನಿಕವಾಗಿ ಯಾರೇ ಬಂದರೂ ಪ್ರಧಾನಿ ಮೋದಿ ನಮಸ್ಕಾರ ಮಾಡುತ್ತಾರೆ ಎಂದು ತಿಳಿಸಿದರು.

ಸಚಿವ ಸೋಮಣ್ಣ ಕಾಂಗ್ರೆಸ್ ಸೇರಲಿದ್ದಾರೆಂಬ ವದಂತಿ ಕುರಿತು ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಸೋಮಣ್ಣ ಮುಂದೆಯೂ ನಮ್ಮ ಜೊತೆಯೇ ಇರುತ್ತಾರೆ. ನಿನ್ನೆ ಹುಬ್ಬಳ್ಳಿಯಲ್ಲಿ ಯಾವುದೇ ರೀತಿಯ ಮಾತುಕತೆ ಆಗಿಲ್ಲ. ಸೋಮಣ್ಣ ನನ್ನ ಹಳೆಯ ಸ್ನೇಹಿತರು ಔಪಚಾರಿಕ ಭೇಟಿ ಅಷ್ಟೆ ಎಂದರು.

Key words:  PM –Modi- visit – increased -pro-BJP-sentiment – state-CM Bommai.