ಹಿರಿಯ ಪತ್ರಿಕಾ ಛಾಯಾಗ್ರಾಹಕ ಎಂ.ಎಸ್.ಬಸವಣ್ಣ ತೆಗೆದಿರುವ ‘ಚಿರತೆ ಜನರನ್ನು ಅಟ್ಟಾಡಿಸುತ್ತಿರುವ ಚಿತ್ರಕ್ಕೆ ಚಿನ್ನ ಮತ್ತು ಬೆಳ್ಳಿ ಪದಕ.

ಮೈಸೂರು,ಮಾರ್ಚ್,13,2023(www.justkannada.in):  ಮೈಸೂರಿನ ಹಿರಿಯ ಪತ್ರಿಕಾ ಛಾಯಾಗ್ರಾಹಕ ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ  ಎಂ.ಎಸ್.ಬಸವಣ್ಣ (ಅನುರಾಗ್ ಬಸವರಾಜ್) ಅವರು ತೆಗೆದಿರುವ ಚಿರತೆಯೊಂದು ಜನರನ್ನು ಅಟ್ಟಾಡಿಸುತ್ತಿರುವ ಚಿತ್ರಕ್ಕೆ  ಪಶ್ಚಿಮ ಬಂಗಾಳದ ಹೆಲೀಸ್ ಸರ್ಕ್ಯೂಟ್ ಮತ್ತು ಫೋಟೋಗ್ರಫಿ ಸೊಸೈಟಿ ಆಫ್ ಅಮೇರಿಕ(psa) ಸಂಯುಕ್ತಾಶ್ರಯದಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪದಕ ಲಭಿಸಿದೆ.

ಈ ಸ್ಪರ್ಧೆಯಲ್ಲಿ ಅಮೇರಿಕಾ, ಜರ್ಮನ್, ಉಕ್ರೇನ್, ಹಾಂಕಾಂಗ್, ಕೆನಡಾ, ಕೊರಿಯಾ, ಜಪಾನ್, ಇಟಲಿ ಸೇರಿದಂತೆ 30 ರಾಷ್ಟ್ರಗಳ ಛಾಯಾಗ್ರಾಹಕರು 5 ವಿಭಾಗದಿಂದ  3500 ಹೆಚ್ಚು  ಛಾಯಾಚಿತ್ರ ಪ್ರದರ್ಶಿಸಿದ್ದರು.

ವನ್ಯಜೀವಿ ವಿಭಾಗದಲ್ಲಿ ನಾಗರಹೊಳೆ  ಅರಣ್ಯದಲ್ಲಿ ತೆಗೆದಿರುವ ಹುಲಿಯೊಂದು ಕಾಡಂದಿಯನ್ನು ಬೇಟೆಯಾಡಲು ಅಟ್ಟಾಡಿಸುತ್ತಿರುವ ಚಿತ್ರಕ್ಕೆ ಕಂಚಿನ ಪದಕ ಲಭಿಸಿದ್ದು ಈ ಸಂದರ್ಭದಲ್ಲಿ ಎಂ.ಎಸ್.ಬಸವಣ್ಣರನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಅಭಿನಂದಿಸಿದೆ.

Key words: Gold – silver -medal – senior press- photographer- MS Basavanna-mysore