ಕಂಕಣ ಸೂರ್ಯಗ್ರಹಣ ಗೋಚರದ ಬಗ್ಗೆ ಟ್ವಿಟ್ ಮಾಡಿದ ಪ್ರಧಾನಿ ಮೋದಿ…

Promotion

ನವದೆಹಲಿ,ಡಿ,26,2019(www.justkannada.in): ಇಂದು ವಿಶ್ವದೆಲ್ಲೆಡೆ  ಕಂಕಣ ಸೂರ್ಯಗ್ರಹಣ  ಗೋಚರವಾಗಿದ್ದು ಎಲ್ಲರೂ ಕಂಕಣ ಸೂರ್ಯಗ್ರಹಣವನ್ನ ನೋಡಿ ಕಣ್ತುಂಬಿಕೊಂಡಿದ್ದಾರೆ. ದೇಶದ  ಕೆಲವು ಕಡೆಗಳಲ್ಲಿ ಮೋಡ ಮುಸುಕಿನ ವಾತಾವರಣವಿದ್ದ ಹಿನ್ನಲೆ ಕಂಕಣ ಸೂರ್ಯಗ್ರಹಣ ಗೋಚರಿಸಲಿಲ್ಲ.

ಸೂರ್ಯಗ್ರಹಣದ ಬಗ್ಗೆ ಟ್ವಿಟ್ ಮಾಡಿರುವ ಪ್ರಧಾನಿ ಮೋದಿ, ‘ಭಾರತದ ಇತರ ಎಲ್ಲಾ ಜನರಂತೆ ನಾನು ಸಹ ಸೂರ್ಯಗ್ರಹಣ ನೋಡಲು ತುಂಬಾನೇ ಕಾತುರನಾಗಿದ್ದೆ, ಆದರೆ ಮೋಡ ಮುಸುಕಿದ ವಾತಾವರಣ ಇದ್ದುದರಿಂದ ಸೂರ್ಯನನ್ನು ನೋಡಲು ಸಾಧ್ಯವಾಗಲಿಲ್ಲ , ಆದರೆ ಈ ವಿಸ್ಮಯದ ಲೈವ್ ಸ್ಟ್ರೀಮ್ ನ್ನು ನೋಡಿದ್ದೇನೆ, ಜೊತೆಗೆ ಈ ಕುರಿತು  ಖಗೋಳ ತಜ್ಞರ ಜೊತೆ ಚರ್ಚಿಸಿದ್ದೇನೆ. ಸೂರ್ಯಗ್ರಹಣದ ಬಗ್ಗೆ ಮಾಹಿತಿ ಪಡೆದಿದ್ದೇನೆ ಎಂದು ಟ್ವಿಟ್ ಮಾಡಿದ್ದಾರೆ.

ಬೆಂಗಳೂರಿನಲ್ಲೂ ಮೋಡಮುಸುಕಿದ ವಾತಾವರಣ ಹಿನ್ನೆಲೆ ಸೂರ್ಯಗ್ರಹಣ ವೀಕ್ಷಣೆಗೆ ಅಡ್ಡಿಯುಂಟಾಗಿತ್ತು.  2020ರ ಜೂನ್​​ 21ರಂದು ಮುಂದಿನ ಸೂರ್ಯಗ್ರಹಣ ಕಾಣಿಸಿಕೊಳ್ಳಲಿದೆ.

Key words: PM Modi –tweeted- about – Solar Eclipse