Wednesday, August 12, 2026

BDA Apartments

Home Cinema ವಿದೇಶಗಳಲ್ಲೂ ‘ಶ್ರೀಮನ್ನಾರಾಯಣ’ ಹ್ಯಾಂಡ್ಸಪ್ ಹವಾ !

ವಿದೇಶಗಳಲ್ಲೂ ‘ಶ್ರೀಮನ್ನಾರಾಯಣ’ ಹ್ಯಾಂಡ್ಸಪ್ ಹವಾ !

ಬೆಂಗಳೂರು, ಡಿಸೆಂಬರ್ 26, 2019 (www.justkannada.in): ಅವನೇ ಶ್ರೀಮನ್ನಾರಾಯಣ ಚಿತ್ರದ ಹ್ಯಾಂಡ್ಸಪ್ ಹಾಡು ವಿದೇಶಗಳಲ್ಲಿಯೂ ಟ್ರೆಂಡ್ ಸೆಟ್ ಮಾಡಿದೆ.

ಚಿತ್ರ ನಾಳೆ ಬಿಡುಗಡೆಯಾಗುತ್ತಿದ್ದು, ಅದೀಗ ರಾಜ್ಯ, ದೇಶದ ಗಡಿ ದಾಟಿದೆ. ಇದರ ಲಿರಿಕ್ಸ್, ಸಂಗೀತ ಮತ್ತು ರಕ್ಷಿತ್ ಶೆಟ್ಟಿ ಸ್ಟೆಪ್ ಹಾಕಿರುವ ರೀತಿ ಟ್ರೆಂಡ್ ಸೆಟ್ ಮಾಡಿ ಬಿಟ್ಟಿದೆ. ಕೇವಲ ಕರ್ನಾಟಕ ಮಾತ್ರವಲ್ಲದೇ ದೇಶ ವಿದೇಶಗಳಲ್ಲಿಯೂ ಹ್ಯಾಂಡ್ಸಪ್ ಹಾಡಿಗೆ ಜನ ಮರುಳಾಗಿದ್ದಾರೆ.

ಮೂಲಕ ಬಿಡುಗಡೆಗೂ ಮುನ್ನವೇ ‘ಶ್ರೀಮನ್ನಾರಾಯಣ’ನ ಅವತಾರ ವಿದೇಶಗಳಲ್ಲಿಯೂ ಜನಜನಿತವಾಗಿ ಬಿಟ್ಟಿದೆ. ಈ ಹಾಡಿನ ಸ್ಟೆಪ್ಸ್ ಮತ್ತು ಅದರ ಸಂಗೀತದ ಝಲಕ್ಕಿಗೆ ಪ್ರೇಕ್ಷಕರೆಲ್ಲ ಫಿದಾ ಆಗಿ ಬಿಟ್ಟಿದ್ದಾರೆ.