ರೌಡಿಶೀಟರ್ ಗೆ ಪ್ರಧಾನಿ ಮೋದಿ ನಮಸ್ಕರಿಸಿದ ವಿಚಾರ: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ.

Promotion

ಬೆಂಗಳೂರು,ಮಾರ್ಚ್,13,2023(www.justkannada.in): ನಿನ್ನೆ  ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯಗೆ ಭೇಟಿ ನೀಡಿದ್ದ ವೇಳೆ ರೌಡಿಶೀಟರ್ ಗೆ ಕೈಮುಗಿದು ನಮಸ್ಕರಿಸಿದ್ದು ಭಾರಿ ಟೀಕೆಗೆ ಗುರಿಯಾಗಿದ್ದು ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿರುವ ಹೆಚ್.ಡಿ ಕುಮಾರಸ್ವಾಮಿ, ಡಾನ್ ಕ್ರಿಕೆಟ್ ಬೆಟ್ಟಿಂಗ್ ನಡೆಸುವವನಿಗೆ ಪ್ರಧಾನಿ ಮೋದಿ ತಲೆ ಬಾಗಿದ್ದಾರೆ. ಬಿಜೆಪಿ ದೈನೇಸಿ ಸ್ಥಿತಿಗೆ ತಲುಪಿರೋದಕ್ಕೆ ಇದು ಸಾಕ್ಷಿ. ಇದು ನಾಚಿಕೆಗೇಡಿನ ಸಂಗತಿ. . ಈ ದೃಶ್ಯ ನೋಡಿದ್ರೆ  ಬಿಜೆಪಿಯವರ ಸ್ಥಿತಿ ಗೊತ್ತಾಗುತ್ತೆ ಎಂದು ಟೀಕಿಸಿದರು.

ನಿನ್ನೆ ಪ್ರಧಾನಿ ಮೋದಿ ಬೆಂಗಳೂರು-ಮೈಸೂರು ಎಕ್ಸ್​ ಪ್ರೆಸ್ ​ವೇ ಉದ್ಘಾಟಿಸಿ ಹೋಗಿದ್ದಾರೆ. ಆದರೆ, ಮೋದಿ ಓರ್ವ ರೌಡಿ ಶೀಟರ್​ಗೆ ಕೈಮುಗಿದಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಮೋದಿ ಮಂಡ್ಯ ಹೆಲಿಪ್ಯಾಡ್‍ ಗೆ ಬಂದಿಳಿದ ವೇಳೆ ಬಿಜೆಪಿ ಮುಖಂಡರು ಸ್ವಾಗತಕೋರಿದ್ದರು. ಈ ವೇಳೆ ಬಿಜೆಪಿ ಮುಖಂಡರ ಜೊತೆ ರೌಡಿ ಶೀಟರ್  ಫೈಟರ್ ರವಿ ಸಹ ಕಾಣಿಸಿಕೊಂಡಿದ್ದು, ಮೋದಿಗೆ ಕೈ ಮುಗಿದು ಸ್ವಾಗತ ಕೋರಿದ್ದಾರೆ. ಇದಕ್ಕೆ ಮೋದಿ ಸಹ ಫೈಟರ್ ರವಿ ಎದುರು ಕೈ ಮುಗಿದು ನಿಂತಿದ್ದು, ಇದೀಗ ಬಾರಿ ಟೀಕೆಗೆ ಕುರಿಯಾಗಿದೆ.

Key words: PM Modi-salute – rowdy-sheeter-Former CM -HD Kumaraswamy