ಮುಡಾ ಅಧ್ಯಕ್ಷ ಯಶಸ್ವಿ ಸೋಮಶೇಖರ್ ರಿಂದ 2023-24 ನೇ ಸಾಲಿನ ಆಯವ್ಯಯ ಮಂಡನೆ.

ಮೈಸೂರು,ಮಾರ್ಚ್,13,2023(www.justkannada.in):  ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ 2023-24 ನೇ ಸಾಲಿನ ಅಂದಾಜು ಆಯವ್ಯಯವನ್ನ ಮುಡಾ ಅಧ್ಯಕ್ಷ  ಯಶಸ್ವಿ ಸೋಮಶೇಖರ್ ಮಂಡನೆ ಮಾಡಿದರು.

ಮುಡಾ ಆಯವ್ಯಯ ಮಂಡನಾ  ಸಭೆಯಲ್ಲಿ  ಸ್ಥಳೀಯ ಶಾಸಕರಾದ ಜಿಟಿ ದೇವೇಗೌಡ, ತನ್ವೀರ್ ಸೇಠ್, ಎಲ್. ನಾಗೇಂದ್ರ, ಹರ್ಷವರ್ಧನ್, ಪರಿಷತ್ ಸದಸ್ಯರಾದ ಎಚ್ ವಿಶ್ವನಾಥ್, ಮಂಜೇಗೌಡ, ಮರಿತಿಬ್ಬೇಗೌಡ ಹಾಗೂ ಡಾ.ತಿಮ್ಮಯ್ಯ ಸೇರಿದಂತೆ ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಗಳು ಹಾಗೂ  ಪ್ರಾಧಿಕಾರದ ಅಧಿಕಾರಿ ವರ್ಗ ಭಾಗಿಯಾಗಿದ್ದರು.

ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಬಜೆಟ್ ಪುಸ್ತಕ ಬಿಡುಗಡೆ ಮಾಡಿದರು.  ಮುಡಾ ಆಯುಕ್ತ ಜಿ.ಟಿ ದಿನೇಶ್ ಕುಮಾರ್ ಅವರು ಆಯವ್ಯಯದ ಅಂದಾಜು ಪಟ್ಟಿ ಮಂಡಿಸಿದರು.  ಎಲ್ಲ ಮೂಲಗಳಿಂದ ಪ್ರಸಕ್ತ ಸಾಲಿನ ಒಟ್ಟು ಅಂದಾಜು ಆದಾಯ ಸಂಗ್ರಹ ನಿರೀಕ್ಷೆ 50,226.88 ಲಕ್ಷಗಳು. ವಿವಿಧ ಯೋಜನೆಗಳಿಗೆ 49768.51 ಲಕ್ಷಗಳ ವೆಚ್ಚ ಮಾಡಲು ಆಯವ್ಯಯದಲ್ಲಿ ನಿರ್ಧರಿಸಲಾಗಿದೆ.

ಇನ್ನು  ಶಾಸಕ ತನ್ವೀರ್ ಸೇಠ್ ಮತ್ತು ಪರಿಷತ್ ಸದಸ್ಯ ವಿಶ್ವನಾಥ್ ಅವರು ಕೆಲ ಅವೈಜ್ಞಾನಿಕ ಯೋಜನೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿ ಕೆಲ ಸಲಹೇ ಸೂಚನೆಗಳನ್ನ ನೀಡಿದರು.

Key words: Budget- Muda -President -Yasashvi Somashekhar.