ನನ್ನ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ:ಅದಾನಿಯನ್ನ ಮೋದಿ ರಕ್ಷಿಸುತ್ತಿದ್ದಾರೆ- ರಾಹುಲ್ ಗಾಂಧಿ ವಾಗ್ದಾಳಿ.

Promotion

ನವದೆಹಲಿ,ಫೆಬ್ರವರಿ,8,2023(www.justkannada.in): ಅದಾನಿ ಅವ್ಯವಹಾರದ ಕುರಿತು ನಾನು ಕೇಳಿದ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಉತ್ತರಿಸಲಿಲ್ಲ. ಈ ಮೂಲಕ ಅದಾನಿಯನ್ನ ಮೋದಿಯವರು ರಕ್ಷಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದರು.

ಲೋಕಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣಕ್ಕೆ ಧನ್ಯವಾದ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ ಪ್ರಧಾನಿ ಮೋದಿ ಈ ವೇಳೆ  ವಿಪಕ್ಷಗಳನ್ನ ಟೀಕಿಸಿದರು. ಇದೇ ಸಮಯದಲ್ಲಿ ಗೌತಮ್ ಅದಾನಿ ಅವ್ಯವಹಾರದ ಬಗ್ಗೆ ತನಿಖೆಗೆ ಆಗ್ರಹಿಸಿ ವಿಪಕ್ಷಗಳಾದ ಬಿಆರ್ ಎಸ್, ಕಾಂಗ್ರೆಸ್ ಸಭಾತ್ಯಾಗ ಮಾಡಿದ ಘಟನೆ ನಡೆಯಿತು.

ನಂತರ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ,  ಮೋದಿ ನನ್ನ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ. ಅದಾನಿ ವಿರುದ್ಧದ ತನಿಖೆ ಬಗ್ಗೆ ಮಾತನಾಡಲಿಲ್ಲ ಮೋದಿ ಅದಾನಿಯನ್ನ ರಕ್ಷಿಸುತ್ತಿದ್ದಾರೆ. ಪ್ರಧಾನಿ ಉತ್ತರದಿಂದ ನಮಗೆ ನಿರಾಸೆ ಉಂಟಾಗಿದೆ.  ಅದಾನಿ  ಅವ್ಯವಹಾರದ ಬಗ್ಗೆ ತನಿಖೆ ಮಾಡಿಸಿ ಎಂದು ಆಗ್ರಹಿಸಿದರು.

Key words: PM- Modi – protected- Adani-Rahul Gandhi