ಶಿವಮೊಗ್ಗ ಏರ್ ಪೋರ್ಟ್ ಗೆ ಬಿಎಸ್ ವೈ ಹೆಸರಿಡುವ ವಿಚಾರ: ಭೂಮಿ ಕಳೆದುಕೊಂಡವರಿಗೆ ಪರಿಹಾರ ಕೊಡುವಂತೆ ಡಿಕೆ ಶಿವಕುಮಾರ್ ಆಗ್ರಹ.

ಶಿವಮೊಗ್ಗ,ಫೆಬ್ರವರಿ,9,2023(www.justkannada.in):  ಶಿವಮೊಗ್ಗ ಏರ್ ಪೋರ್ಟ್ ಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೆಸರಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟಾಂಗ್ ನೀಡಿದ್ದಾರೆ.

ಈ ಕುರಿತು ಶಿವಮೊಗ್ಗದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ಶಿವಮೊಗ್ಗ ಏರ್ ಪೋರ್ಟ್ ಗೆ ಯಾರ ಹೆಸರು ಬೇಕಾದ್ರೂ ಇಟ್ಟಿಕೊಳ್ಳಲಿ. ಆದ್ರೆ ಭೂಮಿ ಕಳೆದುಕೊಂಡವರಿಗೆ ಸರ್ಕಾರ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

ಇಡಿ ಮತ್ತು ಸಿಬಿಐ ನೋಟಿಸ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿ‍ಕ್ರಿಯಿಸಿದ ಡಿ.ಕೆ ಶಿವಕುಮಾರ್,  ಫೆ.22 ರಂದು ವಿಚಾರಣೆಗೆ ಬರುವಂತೆ ಇಡಿ ನೋಟಿಸ್ ನೀಡಿದೆ. ನನ್ನ ಮಗಳಿಗೆ ಸಿಬಿಐ ಅಧಿಕಾರಿಗಳು ನೊಟೀಸ್ ನೀಡಿದ್ದಾರೆ.  ನನ್ನ ಮಕ್ಕಳ ಶಿಕ್ಷಣದ ಶುಲ್ಗದ ಬಗ್ಗೆ  ವಿಚಾರಣೆಗೆ ಕರೆದಿದ್ದಾರೆ. ಈ ಬಗ್ಗೆ ನಾನು ಸಿಬಿಐಗೆ ಪತ್ರ ಬರೆಯುತ್ತೇನೆ ಎಂದರು.

ನಾನು ಶಾಸಕ ರಮೇಶ್ ಜಾರಕಿಹೊಳಿ ವಿಚಾರ ಮಾತನಾಡಲ್ಲ. ಮಂತ್ರಿ ಸ್ಥಾನ ಸಿಗದಿದ್ದಕ್ಕೆ ಜಾರಕಿಹೊಳಿ ಈಶ್ವರಪ್ಪ ಹತಾಶರಾಗಿದ್ದಾರೆ ಎಂದು ಲೇವಡಿ ಮಾಡಿದರು.

Key words: Shimoga –Airport- BS Yeddyurappa-name -DK Shivakumar