ಜೂನ್ 2ಕ್ಕೆ ಸಿಎಂಗಳ ಸಭೆ ಕರೆದ ಪ್ರಧಾನಿ

Promotion

ಬೆಂಗಳೂರು, ಮೇ 30,2021 (www.justkannada.in): ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಜೂನ್​ 2ಕ್ಕೆ ಸಿಎಂಗಳ ಸಭೆಯನ್ನು ಪ್ರಧಾನಿ ಮೋದಿ ಕರೆದಿದ್ದಾರೆ.

ಕೊರೋನಾ ಎರಡನೇ ಅಲೆ ನಿಯಂತ್ರಣಕ್ಕೆ ಬರಲು ಇನ್ನೂ ಕೆಲ ದಿನಗಳು ಬೇಕಾಗಬಹುದು. ಇನ್ನೂ ಕೆಲವು ಕಟ್ಟು‌ ನಿಟ್ಟಿನ ಕ್ರಮಗಳು ಬೇಕಾಗಬಹುದು. ಈ ಬಗ್ಗೆ ಪಿಎಂ ಸೂಚನೆ ನೀಡಿದ್ದಾರೆ.

ಸಕ್ರೀಯ ಪ್ರಕರಣಗಳು ಇನ್ನೂ ಕಡಿಮೆ ಆಗಬೇಕಿದೆ. ಕೊರೋನಾದಿಂದ ಸಾಯುತ್ತಿರುವವರ ಸಂಖ್ಯೆಯಲ್ಲೂ ಗಣನೀಯ ಇಳಿಕೆ ಕಂಡಿಲ್ಲ. ಈ ಬಗ್ಗೆ ಮೋದಿ ಎಲ್ಲ ಸಿಎಂಗಳಿಂದ ಮಾಹಿತಿ ಪಡೆಯಲಿದ್ದಾರೆ.

ಜೂನ್ 2ರಂದು ಮಧ್ಯಾಹ್ನ 12.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಯಲಿದೆ. ಮಹಾರಾಷ್ಟ್ರ, ತಮಿಳುನಾಡು, ಪಂಜಾಬ್, ಮಧ್ಯಪ್ರದೇಶ, ಗುಜರಾತ್, ಕರ್ನಾಟಕ ಮತ್ತು ಹರಿಯಾಣ‌ ಮತ್ತಿತರ ರಾಜ್ಯಗಳ ಸಿಎಂಗಳು ಪಾಲ್ಗೊಳ್ಳಲಿದ್ದಾರೆ.