Friday, September 18, 2026

BDA Apartments

Home Front Page 2 ವರ್ಷ ಪೂರೈಸಿದ ಕೇಂದ್ರ ಸರಕಾರ: ಮೈಸೂರಲ್ಲಿ ಪೌರಕಾರ್ಮಿಕರಿಗೆ ಪೌಷ್ಠಿಕ ಆಹಾರ ವಿತರಣೆ

2 ವರ್ಷ ಪೂರೈಸಿದ ಕೇಂದ್ರ ಸರಕಾರ: ಮೈಸೂರಲ್ಲಿ ಪೌರಕಾರ್ಮಿಕರಿಗೆ ಪೌಷ್ಠಿಕ ಆಹಾರ ವಿತರಣೆ

ಮೈಸೂರು, ಮೇ 30,2021 (www.justkannada.in): ನಗರದಲ್ಲಿ ಇಂದು ಪೌರಕಾರ್ಮಿಕರಿಗೆ ಪೌಷ್ಠಿಕ ಆಹಾರ ವಿತರಿಸುವ ಮೂಲಕ ಕೇಂದ್ರ ಸರಕಾರದ 2ನೇ ವರ್ಷದ ಸಂಭ್ರಮಾಚರಣೆ ಮಾಡಲಾಯಿತು.

ಬಿಜೆಪಿ ವ್ಯಾಪಾರಿ ಪ್ರಕೋಷ್ಠ  ಹಾಗೂ ವಾಣಿಜ್ಯ ಪ್ರಕೋಷ್ಠ ವತಿಯಿಂದ ಚಾಮುಂಡಿಪುರಂ ವೃತ್ತ ದಲ್ಲಿ ಪೌರಕಾರ್ಮಿಕರಿಗೆ ಪೌಷ್ಠಿಕ ಆಹಾರ ವಿತರಿಸುವ ಮೂಲಕ  ಎರಡನೇ ಅವಧಿಯ 2ವರ್ಷ ಪೂರೈಸಿದ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲಾಯಿತು.

ಬಿಜೆಪಿ ರಾಜ್ಯದ ಆದೇಶದ ಮೇರೆಗೆ ಸೇವೆಯೇ ಸಂಘಟನೆ ಎಂಬ ಕಾರ್ಯಕ್ರಮವನ್ನು ಪೌರಕಾರ್ಮಿಕರಿಗೆ ಪೌಷ್ಟಿಕ ಆಹಾರ ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಬಿಜೆಪಿ ನಗರ ಅಧ್ಯಕ್ಷ ರಾದ ಟಿ ಎಸ್ ಶ್ರೀವತ್ಸ, ಪಕ್ಷ ಹಾಗೂ ಮೋದಿ ಕಾರ್ಯವೈಖರಿಯನ್ನು ಕೊಂಡಾಡಿದರು. ನಗರಪಾಲಿಕೆ ಸದಸ್ಯ ಮಾ ವಿ ರಾಮಪ್ರಸಾದ್ ,ಬಿಜೆಪಿ ವ್ಯಾಪಾರಿ ಪ್ರಕೋಷ್ಠ  ಸಂಚಲಕರಾದ ಅಪೂರ್ವ ಸುರೇಶ್ ,ಸಹ ಸಂಚಾಲಕರಾದ ಪರಮೇಶ್ ಗೌಡ , ಮಾಜಿ ನಗರ ಪಾಲಿಕಾ ಸದಸ್ಯರಾದ ಜಯರಾಂ ,ಕಾರ್ಯಾಲಯ ಕಾರ್ಯದರ್ಶಿ ಚೇತನ್ ,ಸಂದೀಪ್  ಇನ್ನಿತರರು ಹಾಜರಿದ್ದರು.