ದಯವಿಟ್ಟು ಬಹಿಷ್ಕಾರ ನಿರ್ಧಾರ ಕೈಬಿಡಿ: ನಟ ಅಕ್ಷಯ್ ಕುಮಾರ್ ಮನವಿ

Promotion

ಬೆಂಗಳೂರು, ಆಗಸ್ಟ್ 10, 2022 (www.justkannada.in): ‘ಬಹಿಷ್ಕಾರ’ ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ರೆಂಡಿಂಗ್ ಆಗುತ್ತಿರುವ ಚಲನಚಿತ್ರಗಳ ಕುರಿತು ನಟ ಅಕ್ಷಯ್ ಕುಮಾರ್ ಮಾತನಾಡಿದ್ದಾರೆ.

ಚಿತ್ರಗಳ ಬಹಿಷ್ಕಾರಕ್ಕೆ ಪದೇ ಪದೇ ಅಭಿಯಾನ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬಾಲಿವುಡ್ ಬಿಕ್ಕಟ್ಟಿಗೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅಕ್ಷಯ್, ಚಲನಚಿತ್ರಗಳನ್ನು ಬಹಿಷ್ಕರಿಸದಂತೆ ಪ್ರೇಕ್ಷಕರಿಗೆ ಮನವಿ ಮಾಡಿದ್ದಾರೆ.

ಆಮೀರ್‌ ಖಾನ್ ಅಭಿನಯದ ಲಾಲ್‌ ಸಿಂಗ್‌ ಚಡ್ಡಾ ಹಾಗೂ ರಣಬೀರ್‌ ಕಪೂರ್‌ ಅವರ ಬ್ರಹ್ಮಾಸ್ತ್ರ ಸೇರಿದಂತೆ ಹಲವು ಬಾಲಿವುಡ್‌ ಚಿತ್ರಗಳಿಗೆ ಬಲಪಂಥೀಯರು ಬಹಿಷ್ಕಾರ ಅಭಿಯಾನ ನಡೆಸುತ್ತಿದ್ದಾರೆ.

ಅಂದಹಾಗೆ ಅಕ್ಷಯ್ ಕುಮಾರ್ ಅವರ ವೃತ್ತಿಜೀವನಕ್ಕೆ ಸಂಬಂಧಿಸಿದಂತೆ 2022 ವರ್ಷವು ಉತ್ತಮವಾಗಿಲ್ಲ. ಅವರ ಕೊನೆಯ ಎರಡು ಚಿತ್ರಗಳಾದ ಬಚ್ಚನ್ ಪಾಂಡೆ ಮತ್ತು ಸಾಮ್ರಾಟ್ ಪೃಥ್ವಿರಾಜ್ ಕೂಡ ನಿರೀಕ್ಷಿಸಿದಷ್ಟು ಗಳಿಕೆ ಕಂಡಿರಲಿಲ್ಲ.