‘ಶ್ರೀಮನ್ನಾರಾಯಣ’ನಿಗೂ ಪೈರಸಿ ಕಾಟ!

Promotion

ಬೆಂಗಳೂರು, ಡಿಸೆಂಬರ್ 28, 2019 (www.justkannada.in):  ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಸಿನಿಮಾ ಸದ್ಯ ಕನ್ನಡದಲ್ಲಿ ಬಿಡುಗಡೆಯಾಗಿದ್ದು, ಮುಂದಿನ ದಿನಗಳಲ್ಲಿ ತಮಿಳು, ತೆಲುಗು, ಮಲಯಾಳಂನಲ್ಲೂ ಬಿಡುಗಡೆಯಾಗಲಿದೆ.

ಆದರೆ ಈ ಶ್ರಮಕ್ಕೆ ನೀರೆರಚುವ ಪ್ರಯತ್ನವನ್ನು ಮತ್ತೆ ಪೈರಸಿಕೋರರು ಮಾಡಿದ್ದಾರೆ. ತಮಿಳು ರಾಕರ್ಸ್ ಎಂಬ ಅನಧಿಕೃತ ವೆಬ್ ಸೈಟ್ ಇತ್ತೀಚೆಗೆ ಕನ್ನಡದ ಪ್ರಮುಖ ಸಿನಿಮಾಗಳನ್ನು ಪೈರಸಿ ಮಾಡಿ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಆನ್ ಲೈನ್ ನಲ್ಲಿ ಹರಿಯಬಿಡುತ್ತಿದೆ.

ಇದೀಗ ಅವನೇ ಶ್ರೀಮನ್ನಾರಾಯಣ ಸಿನಿಮಾವನ್ನೂ ಇದೇ ವೆಬ್ ಸೈಟ್ ಪೈರೇಟೆಡ್ ವರ್ಷನ್ ಹರಿಯಬಿಟ್ಟಿದೆ. ಈ ಮೂಲಕ ಚಿತ್ರತಂಡಕ್ಕೆ ತಲೆನೋವಾಗಿದೆ.