ಫೋನಿ ಚಂಡಮಾರುತ ಎಫೆಕ್ಟ್ : ರಾಜ್ಯದಿಂದ ತೆರಳಬೇಕಿದ್ದ  8 ರೈಲುಗಳ ಸಂಚಾರ ರದ್ದು…

ಬೆಂಗಳೂರು,ಮೇ,3,2019(www.justkannada.in): ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಎದ್ದಿರುವ ಫ್ಯಾನಿ ಚಂಡಮಾರುತ ಈಗಾಗಲೇ ಒಡಿಶಾದ ಕರಾವಳಿ ಭಾಗಕ್ಕೆ ಅಪ್ಪಳಿಸಿದ್ದು ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದೆ. ಈ ನಡುವೆ ಫೋನಿ ಚಂಡಮಾರತ ಎಫೆಕ್ಟ್ ನಿಂದಾಗಿ ರಾಜ್ಯದಿಂದ ತೆರಳಬೇಕಿದ್ದ 8 ರೈಲುಗಳ ಸಂಚಾರವನ್ನ ರದ್ದು ಮಾಡಿಲಾಗಿದೆ.

ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಫೋನಿ ಚಂಡಮಾರುತ ಎಫೆಕ್ಟ್ ತಟ್ಟಿದ್ದು ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲೂ ಇದರ ಪರಿಣಾಮ ಬೀರಲಿದೆ. ಹೀಗಾಗಿ ಒಡಿಶಾ ಮತ್ತು ಪಶ್ಚಿಮಬಂಗಾಳಕ್ಕೆ ತೆರಳಬೇಕಿರುವ 8 ರೈಲುಗಳ ಸಂಚಾರವನ್ನ ಮೇ 6ರವರೆಗೆ ಸ್ಥಗಿತಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮೈಸೂರು, ಬೆಂಗಳೂರು,  ಹುಬ್ಬಳ್ಳಿ, ಯಶವಂತಪುರ, ಬೆಂಗಳೂರು ಕಂಟೋಲ್ಮೆಂಟ್ ನಿಂದ ಹೊರಡಬೇಕಿದ್ದ ರೈಲುಗಳ ಸಂಚಾರವನ್ನ ರದ್ದು ಮಾಡಲಾಗಿದೆ. ಮೈಸೂರು-ಹೌರ ಎಕ್ಸ್ ಪ್ರೆಸ್, ಬೆಂಗಳೂರು- ಭುವನೇಶ್ವರ, ಜಾಫರ್ಪರ- ಯಶವಂತಪುರ ರೈಲು ಸಂಚಾರವನ್ನ ಸ್ಥಗಿತಗೊಳಿಸಲಾಗಿದೆ.

Key words: Phony – Cyclone –Effect- 8 trains- canceled -karnataka