ಮೈತ್ರಿಗೆ ಭಂಗ ಆಗಲ್ಲ: ಮಂಡ್ಯ ಮೈಸೂರಲ್ಲಿ ದೋಸ್ತಿ ಅಭ್ಯರ್ಥಿ ಗೆಲವು ನಿಶ್ಚಿತ -ಸಿ.ಎಚ್ ವಿಜಯ್ ಶಂಕರ್ ವಿಶ್ವಾಸ…

ಮಡಿಕೇರಿ,ಮೇ,3,2019(www.justkannada.in):   ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಭಂಗ ಆಗಿಲ್ಲ. ಮಂಡ್ಯ ಮೈಸೂರಿನಲ್ಲಿ ದೋಸ್ತಿ ಅಭ್ಯರ್ಥಿಗಳಿಗೆ ಗೆಲುವು ನಿಶ್ಚಿತ ಎಂದು ಮೈಸೂರು-ಕೊಡಗು ಅಭ್ಯರ್ಥಿ ಸಿ.ಎಚ್ ವಿಜಯ್ ಶಂಕರ್ ವಿಶ್ವಾಸ ವ್ಯಕ್ತಪಡಿಸಿದರು.

ಮಡಿಕೇರಿಯಲ್ಲಿ ಇಂದು ಮಾಧ್ಯಮದ ಜತೆ ಮಾತನಾಡಿದ ಸಿ.ಎಚ್ ವಿಜಯ್ ಶಂಕರ್, ಸಚಿವ ಜಿ.ಟಿ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿ, ಜಿ.ಟಿ ದೇವೇಗೌಡರು ಆ ರೀತಿ ಹೇಳಿಲ್ಲ ಕಾರ್ಯಕರ್ತರನ್ನ  ಮನವೊಲಿಸಲು ಆಗಲ್ಲ ಎಂದಿದ್ದಾರೆ ಅಷ್ಟ.  ಮೈಸೂರು ಕೊಡಗಿನಲ್ಲಿ ಕೊನೆಯ ಹಂತದಲ್ಲಿ ಎಲ್ಲರೂ ಒಟ್ಟಾಗಿ ಪ್ರಚಾರ ಮಾಡಿದ್ದೇವೆ. ಹೀಗಾಗಿ ನನ್ನ ಗೆಲವು ನಿಶ್ಚಿತ ಎಂದರು.

ಹಾಗೆಯೇ ಮೈಸೂರಲ್ಲ ಮಂಡ್ಯದಲ್ಲೂ ಮೈತ್ರಿ ಅಭ್ಯರ್ಥಿ ಗೆಲ್ಲುತ್ತಾರೆ.ಲ ಮೈತ್ರಿಗೆ ಯಾವುದೇ ತೊಂದರೆ ಆಗಿಲ್ಲ ಎಂದು ಸಿ.ಹೆಚ್ ವಿಜಯ್ ಶಂಕರ್ ತಿಳಿಸಿದರು. ಮೈಸೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿದ್ದಾರೆ. ಉದ್ಬೂರು ಸೇರಿ ಕೆಲವು ಕಡೆ ಹೀಗಾಗಿದೆ ಎಂದು ಸಚಿವ  ಜಿ.ಟಿ ದೇವೇಗೌಡರು ಹೇಳಿಕೆ ನೀಡಿದ್ದರು.

Key words: Not- confused – alliance-Dosti- candidate- wins -CH Vijay Shankar