ಬಂದ್ ಬಗ್ಗೆ ನಾಳೆ ನಮ್ಮ ನಿಲುವು ಪ್ರಕಟ: ಐಕ್ಯ ಸಂಘಟನೆಗಳ ಸಮಿತಿಯಿಂದ ತಾತ್ವಿಕ ಬೆಂಬಲ : ರೈತ ಮುಖಂಡ ಬಡಗಲಪುರ ನಾಗೇಂದ್ರ

Promotion

ಬೆಂಗಳೂರು,ಸೆಪ್ಟೆಂಬರ್,22,2020(www.justkannada.in) : ರೈತ, ಕಾರ್ಮಿಕ, ದಲಿತ ಸಂಘಟನೆಗಳ ಒಳಗೊಂಡ ಐಕ್ಯ ಸಂಘಟನೆಗಳ ಸಮಿತಿಯು ಸೆ.25ರಂದು ಘೋಷಿಸಿರುವ ಭಾರತ್ ಬಂದ್ ಗೆ ತಾತ್ವಿಕವಾಗಿ ಬೆಂಬಲ ಸೂಚಿಸಿದ್ದು, ರಾಜ್ಯದಲ್ಲಿಯೂ ಬಂದ್ ಸಂಬಂಧಿಸಿದಂತೆ ನಾಳೆ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.jk-logo-justkannada-logoಬೆಂಗಳೂರಿನ ಫ್ರೀಡಂಪಾರ್ಕ ನಲ್ಲಿ ನಡೆದ ಐಕ್ಯ ಹೋರಾಟ ಸಂಘಟನೆ ಸಮಿತಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಐಕ್ಯ ಸಂಘಟನೆಗಳ ಸಮಿತಿಯು 29 ಸಂಘಟನೆಗಳನ್ನು ಒಳಗೊಂಡಿದ್ದು, ಕರ್ನಾಟಕ ಬಂದ್ ಸಂಬಂಧಿಸಿದಂತೆ ಎಲ್ಲಾ ಸಂಘಟನೆಗಳೊಂದಿಗೆ ಚರ್ಚಿಸಿ ತೀರ್ಮಾನಕೈಗೊಳ್ಳಲಾಗುವುದು ಎಂದರು.

ಬಂದ್ ಗೆ ರಾಜ್ಯದ ಎಲ್ಲಾ ಜಿಲ್ಲೆಗಳ ರೈತ ಮುಖಂಡರು ಸೇರಿದಂತೆ ಇತರೆ ಸಂಘಟನೆಗಳ ಬೆಂಬಲವನ್ನು ಪಡೆದುಕೊಳ್ಳಬೇಕಿದೆ. ಅಖಿಲ ಭಾರತ ಸಂಘರ್ಷ ಸಮಿತಿ ರಾಷ್ಟ್ರಮಟ್ಟದಲ್ಲಿ ಬೆಂಬಲ ವ್ಯಕ್ತಪಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ಸಂಜೆ 5ಕ್ಕೆ ಜೂಮ್ ಆಪ್ ಮೂಲಕ ಆನ್ ಲೈನ್ ಸಭೆ ನಡೆಸಿ ಅಂತಿಮ ನಿರ್ಧಾರವನ್ನು ನಾಳೆಗೆ ತಿಳಿಸಲಾಗುವುದು ಎಂದರು.

Philosophical-support-United-Nations-Committee- Bharat Bund-Farmer-leader-Badagalpur Nagendra

ಯಡಿಯೂರಪ್ಪ ರೈತನ ಮಗ ಅಲ್ಲ. ಅವರು ಕಾರ್ಪೋರೇಟ್ ಸಾಕು ಮಗ

ಯಡಿಯೂರಪ್ಪ ರೈತನ ಮಗ ಅಲ್ಲ. ಅವರು ಕಾರ್ಪೋರೇಟ್ ಸಾಕು ಮಗ ಆಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರು, ಕಾರ್ಮಿಕರ ಬದುಕಿನ ಜೊತೆಗೆ ಚೆಲ್ಲಾಟವಾಡುತ್ತಿವೆ. ನಮ್ಮ ಹಕ್ಕುಗಳನ್ನು ಕಸಿದುಕೊಳ್ಳುವ ನಿಟ್ಟಿನಲ್ಲಿ ವಿವಿಧ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ಜಾರಿಗೊಳಿಸಲಾಗುತ್ತಿದೆ ಎಂದು ಕಿಡಿಕಾರಿದರು.

ಬಂದ್ ಬಗ್ಗೆ ನಾಳೆ ಪ್ರಕಟ-ರೈತ ಮುಖಂಡ ಕುರುಬೂರು ಶಾಂತ ಕುಮಾರ್…

ರೈತ ಮುಖಂಡ ಕುರುಬೂರು ಶಾಂತ ಕುಮಾರ್ ಮಾತನಾಡಿ, ಬಂದ್ ಸಂಬಂಧಿಸಿದಂತೆ ರಾಷ್ಟ್ರ ಮಟ್ಟದ 207 ಸಂಘಟನೆಗ ಒಟ್ಟುಗೂಡಿ ಚರ್ಚಿಸಲಾಗುವುದು. ನಾಳೆ ಬೆಳಗ್ಗೆ ಅಧಿಕೃತವಾಗಿ ಹೇಳಲಾಗುವುದು. ರಾಜ್ಯದಲ್ಲಿ 80% ಮಂದಿ ರೈತರಿದ್ದು, ಎಲ್ಲ ವರ್ಗದವರು ಸಹಕಾರ ನೀಡಬೇಕು ಎಂದರು. ಸುದ್ದಿಗೋಷ್ಟಿಯಲ್ಲಿ ರೈತ ಮುಖಂಡ ಡಾ.ಪ್ರಕಾಶ ಕಮ್ಮರಡಿ ಇತರರು ಇದ್ದರು.

key words : Philosophical-support-United-Nations-Committee- Bharat Bund-Farmer-leader-Badagalpur Nagendra