ಅತೃಪ್ತ ಶಾಸಕರ ಅರ್ಜಿ ವಿಚಾರಣೆ: ನಾಳೆಗೆ ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್….

ನವದೆಹಲಿ,ಜು,16,2019(www.justkannada.in):  ರಾಜೀನಾಮೆ ಅಂಗೀಕರಿಸಲು ವಿಳಂಬ ಮಾಡುತ್ತಿದ್ದಾರೆಂದು ಆರೋಪಿಸಿ ಅತೃಪ್ತ ಶಾಸಕರು ಸ್ಪೀಕರ್ ವಿರುದ್ದ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ತೀರ್ಪನ್ನ ನಾಳೆಗೆ ಕಾಯ್ದಿರಿಸಿದೆ.

ಸುಪ್ರೀಂಕೋರ್ಟ್  ಸಿಜೆ ರಂಜನ್ ಗೋಗಯ್ ಅವರ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ಅತೃಪ್ತ ಶಾಸಕರ ಅರ್ಜಿ ವಿಚಾರಣೆ ನಡೆಯಿತು.  3ಗಂಟೆ 45 ನಿಮಿಷಗಳ ಕಾಲ ಸುದೀರ್ಘ ನಡೆದ ವಿಚಾರಣೆಯಲ್ಲಿ ಅತೃಪ್ತ ಶಾಸಕರ ಪರ ಮುಕುಲ್ ರೋಹ್ಟಗಿ ಸ್ಪೀಕರ್ ಪರ ಅಭಿಷೇಕ್ ಮನು ಸಿಂಘ್ವಿ, ಸಿಎಂ ಪರ ರಾಜೀವ್ ಧವನ್ ವಾದ ಮಂಡಿಸಿದರು.

ವಾದ ಪ್ರತಿವಾದ ಆಲಿಸಿದ ಬಳಿಕ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ಆದೇಶವನ್ನ ನಾಳೆ ಬೆಳಿಗ್ಗೆ 10.30ಕ್ಕೆ ಕಾಯ್ದಿರಿಸಿದೆ.  ಅಲ್ಲದೆ ಅಲ್ಲಿವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ.

ಸಿಎಂ ಪರ ವಾದ ಮಂಡಿಸಿದ  ವಕೀಲ ರಾಜೀವ್ ಧವನ್ ಶಾಸಕರು ರಾಜೀನಾಮೆ ಅಂಗೀಕಾರವಾದ್ರೆ ಸಚಿವರಾಗ್ತಾರೆ. ಶಾಸಕರ ಉದ್ದೇಶ ಪರಿಶೀಲನೆ ಅಗತ್ಯ. ಪಕ್ಷಾಂತರವೇ ಶಾಸಕರ ಉದ್ದೇಶವಾಗಿದೆ. ಶಾಸಕರ ಸಾಮೂಹಿಕ ರಾಜೀನಾಮೆ ಪ್ರಜಾಪ್ರಭುತ್ವದ ಬುಡವನ್ನು ಅಲುಗಾಡಿಸುತ್ತಿದೆ.  ಸಂವಿಧಾನಿಕವಾಗಿ ಮನವರಿಕೆಯಾದರೆ ಮಾತ್ರ ರಾಜೀನಾಮೆ ಅಂಗೀಕಾರವೆಂದು ಸ್ಪೀಕರ್ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ . ಸ್ಪೀಕರ್ ಆದೇಶ ಕಾನೂನು ವ್ಯಾಪ್ತಿಯಲ್ಲಿ ಇಲ್ಲದಿದ್ದರೆ ಮಾತ್ರ ಪ್ರಶ್ನಿಸಬಹುದು ಎಂದು ಹೇಳಿದರು.

ಸ್ಪೀಕರ್ ಗೆ ವಿಚಾರಣೆ ನಡೆಸಲು ಸಮಯಾವಕಾಶ ನೀಡಬೇಕು.  ಸಂವಿಧಾನ ಯಾವುದನ್ನು ಮೊದಲು ನಿರ್ಧರಿಸಬೇಕು ಎಂದು ಹೇಳಿಲ್ಲ. ಸ್ಪೀಕರ್ ಗೆ ತೃಪ್ತಯಾಗಿದೆ ಎಂದರೇ ಸಂವಿಧಾನದತ್ತವಾಗಿದೆ ಎಂದರ್ಥ.  ಸ್ಪೀಕರ್ ಸ್ಪಷ್ಟವಾಗಿ ಹೇಳಿದ್ದಾರೆ. ನನಗೆ ಮನವರಿಕೆಯಾದರೇ ರಾಜೀನಾಮೆ ಅಂಗೀಕರಿಸುವೆ ಎಂದಿದ್ದಾರೆ.  ಅದು ವೈಯಕ್ತಿಕವಾಗಿ ಮನವರಿಕೆಯಾಗುವುದು ಎಂದಲ್ಲ. ಸಾಂವಿಧಾನಿಕವಾಗಿ ಮನವರಿಕೆಯಾಗುವುದು ಎಂದರ್ಥ  ಎಂದು ರಾಜೀವ್ ಧವನ್ ವಾದ ಮಂಡಿಸಿದರು.

 

Key words: Petition -hearing – dissatisfied MLAs-Supreme Court – judgment -tomorrow.