ಕುಡಿದ ಅಮಲಿನಲ್ಲಿ ಪೊಲೀಸರಿಗೆ ಕಪಾಳ ಮೋಕ್ಷ ಮಾಡಿ ಜೈಲು ಪಾಲಾದ ‘ರಾಮನಗರ ರಾಮ’ !

Promotion

ರಾಮನಗರ, ಜನವರಿ 12, 2019 (www.justkannada.in): ಕುಡಿದ‌ ಅಮಲಿನಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯನ್ನು ಜೈಲಿನ ಅತಿಥಿಯಾಗಿದ್ದಾನೆ.

ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ದೂರು ನೀಡಲು ಬಂದವ ಕುಡಿದ ಅಮಲಿನಲ್ಲಿ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ತಾನೇ ಜೈಲು ಸೇರಿದ್ದಾರೆ. ರಾಮನಗರ ತಾಲ್ಲೂಕಿನ ವಿಭೂತಿಕೆರೆ ನಿವಾಸಿ ರಾಮು (35) ಜೈಲು ಪಾಲಾದ ವ್ಯಕ್ತಿ.

ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ರಾಮನಗರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಲು ಕಂಠಪೂರ್ತಿ ಮದ್ಯ ಸೇವಿಸಿ ಬಂದಿದ್ದು, ಈ ವೇಳೆ ಗ್ರಾಮಾಂತರ ಠಾಣೆಯ ಪೇದೆ ಪ್ರವೀಣ್ ಸ್ವಲ್ಪ ಹೊತ್ತು ಕಾಯಿರಿ ದೂರು ಪಡೆಯುತ್ತೆವೆ ಎಂದ ತಕ್ಷಣವೇ ಆಕ್ರೋಶಗೊಂಡ ರಾಮು ಕರ್ತವ್ಯನಿರತ ಪೋಲೀಸರಿಗೆ ಕಪಾಳಮೋಕ್ಷ ನಡೆಸಿ ಗಲಾಟೆ ಮಾಡಿದ್ದಾನೆ.

ಇದರಿಂದಾಗಿ ಪೊಲೀಸರು ಈತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.