ಸಿಂಧೂರಿ ವರ್ಗ , ವದಂತಿಗೆ ತೆರೆ ; ಕಡೆಗೂ ಬಳ್ಳಾರಿಗೆ ನೂತನ ಜಿಲ್ಲಾಧಿಕಾರಿ ನೇಮಕ..!

 

ಮೈಸೂರು, ಜ.12, 2021 : (www.justkannada.in news) ಬಳ್ಳಾರಿ ಜಿಲ್ಲಾಧಿಕಾರಿಯಾಗಿ ಪವನ್ ಕುಮಾರ್ ಮಲಪತಿ ಅವರನ್ನು ನೇಮಕಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಬೆಂಗಳೂರು ನಗರ ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿದ್ದ ಪವನ್ ಕುಮಾರ್ , ಅವರನ್ನು ಬಳ್ಳಾರಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ನೇಮಕಗೊಳಿಸಿ ಜ.11 ರ ಸಂಜೆ ಆದೇಶ ಹೊರಡಿಸಲಾಗಿದೆ.
ಈ ಮೊದಲು ಬಳ್ಳಾರಿ ಡಿಸಿಯಾಗಿದ್ದ ಎಸ್.ಎಸ್.ನಕುಲ್ ಅವರು ಕೇಂದ್ರ ಸೇವೆಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ, ಪವನ್ ಕುಮಾರ್ ಅವರನ್ನು ನೂತನ ಡಿಸಿಯನ್ನಾಗಿ ನೇಮಿಸಿದೆ.

jk-logo-justkannada-mysore

 

ಸಿಂಧೂರಿ ವದಂತಿ:

ಮೈಸೂರು ಜಿಲ್ಲಾಧಿಕಾರಿಯಾಗಿರುವ ರೋಹಿಣಿ ಸಿಂಧೂರಿ ಅವರನ್ನು ಬಳ್ಳಾರಿಗೆ ವರ್ಗಾಯಿಸಲಾಗಿದೆ ಎಂಬ ವದಂತಿ ಕಳೆದ ವಾರ ಹಬ್ಬಿತ್ತು.
ರಾಜ್ಯದ ಸ್ಥಳೀಯ ಪತ್ರಿಕೆಯೊಂದರಲ್ಲಿ ಈ ಬಗ್ಗೆ ಸುದ್ದಿ ಪ್ರಕಟಿಸಲಾಗಿತ್ತು. ರೋಹಿಣಿ ಸಿಂಧೂರಿ ನೇಮಕ ಪ್ರಶ್ನಿಸಿ ಸಿಎಟಿ ಮೊರೆ ಹೋಗಿರುವ ಕಾರಣ, ಸರಕಾರ ಮುಜುಗರದಿಂದ ತಪ್ಪಿಸಿಕೊಳ್ಳಲು ರೋಹಿಣಿ ಸಿಂಧೂರಿ ಅವರನ್ನು ಬಳ್ಳಾರಿ ಜಿಲ್ಲಾಧಿಕಾರಿಯನ್ನಾಗಿ ವರ್ಗಾಯಿಸಲಿದೆ ಎಂಬುದು ಸುದ್ದಿಯ ಸಾರಾಂಶವಾಗಿತ್ತು.

Rohini Sindhuri – Mysore- DC-Pavan Kumar - new Deputy Commissioner- Ballari District.

ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯನ್ನೇ ನಿಜವೆಂದು ನಂಬಿ, ಸೋಷಿಯಲ್ ಮೀಡಿಯಾಗಳಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು.
ಇದೀಗ ರಾಜ್ಯ ಸರಕಾರ, ಪವನ್ ಕುಮಾರ್ ಅವರನ್ನು ಬಳ್ಳಾರಿ ಜಿಲ್ಲಾಧಿಕಾರಿಯನ್ನಾಗಿ ನೇಮಿಸುವ ಮೂಲಕ ವದಂತಿಗೆ ತೆರೆ ಎಳೆದಿದೆ.

KEY WORDS : Pavan Kumar – new Deputy Commissioner- Ballari District.

ENGLISH SUMMARY :

The State Government has issued orders appointing Pavan Kumar as the new Deputy Commissioner of Ballari District.
Orders were issued on January 11, appointing Pavan Kumar as the new Deputy Commissioner of Ballari. He was serving as the Additional Commissioner of Commercial Tax, in Bengaluru City.

Pavan Kumar - new Deputy Commissioner- Ballari District.
The State Govt. has appointed Pavan Kumar as the new DC of Ballari, as S.S. Nakul, the earlier DC of Ballari, is going to serve in the Centre.
Thus, the government has put a full stop to the rumours of Mysuru DC Rohini Sindhoori being transferred to Ballari, which were making rounds.