ತುಮಕೂರಿನಲ್ಲಿ ಪಂಚರತ್ನ ಯಾತ್ರೆ: ಸಿದ್ಧಗಂಗಾಮಠಕ್ಕೆ ಭೇಟಿ ನೀಡಿದ ಹೆಚ್.ಡಿ ಕುಮಾರಸ್ವಾಮಿ.

Promotion

ತುಮಕೂರು,ಡಿಸೆಂಬರ್,1,2022(www.justkannada.in):  ಜೆಡಿಎಸ್ ಪಂಚರತ್ನಯಾತ್ರೆ ತುಮಕೂರಿಗೆ ಕಾಲಿಟ್ಟಿದ್ದು, ಈ ನಡುವೆ ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ  ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.

ಪಂಚರತ್ನಯಾತ್ರೆ 10 ದಿನಗಳ ಕಾಲ ತುಮಕೂರಿನಲ್ಲೇ ನಡೆಯಲಿದೆ. ಮುಂದಿನ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವ ಜೆಡಿಎಸ್ ಪಂಚರತ್ನಯಾತ್ರೆ  ಮೂಲಕ ಜನರ ಸಮಸ್ಯೆ ಆಲಿಸುತ್ತಿದೆ.

ಈ ಹಿನ್ನೆಲೆಯಲ್ಲಿ ಇಂದು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಹೆಚ್.ಡಿ ಕುಮಾರಸ್ವಾಮಿ ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆ ದರ್ಶನ ಪಡೆದರು. ಬಳಿಕ ಸಿದ್ಧಲಿಂಗ ಶ್ರೀಗಳ ಆಶೀರ್ವಾದ ಪಡೆದರು. ನಂತರ ಮಾತನಾಡಿದ ಅವರು, ಪಂಚರತ್ನಯಾತ್ರೆ ಮೂಲಕ ಜನರ ಸಮಸ್ಯೆ ಬಗೆಹರಿಸಲಾಗುತ್ತದೆ.  ಪಂಚರತ್ನ ಯಾತ್ರೆ ಇಡೀ ರಾಜ್ಯಾದ್ಯಂತ ತೆರಳಲಿದೆ. ತುಮಕೂರು ಜಿಲ್ಲೆಯ  11 ಕ್ಷೇತ್ರಗಳಲ್ಲೂ ಜೆಡಿಎಸ್ ಗೆಲ್ಲುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Key words:  Pancharatna Yatra – Tumkur-HD Kumaraswamy – Siddhaganga Math.