ಪಾಲಿಕೆಯ ಗೃಹೇತರ(ನಾನ್-ಡೊಮಸ್ಟಿಕ್), ವಾಣಿಜ್ಯ ಮತ್ತು ಕೈಗಾರಿಕಾ ಬಳಕೆಯ ನೀರಿನ ದರಗಳಲ್ಲಿ ಹೆಚ್ಚಳ, ಜನವರಿ 01ರಿಂದ ಜಾರಿಗೆ…!

ಮೈಸೂರು,ಡಿಸೆಂಬರ್,30,2020(www.justkannada.in) : ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿರುವ ಗೃಹೇತರ(ನಾನ್-ಡೊಮಸ್ಟಿಕ್), ವಾಣಿಜ್ಯ ಮತ್ತು ಕೈಗಾರಿಕಾ ಬಳಕೆಯ ನೀರಿನ ದರಗಳನ್ನು ಹೆಚ್ಚಿಸಿದ್ದು, ಜನವರಿ 01ರಿಂದ ಜಾರಿಗೆ ಬರಲಿದೆ.

ಗೃಹೇತರ ಬಳಕೆ(ನಾನ್-ಡೊಮಸ್ಟಿಕ್)

10ಸಾವಿರ ಲೀಟರ್ ಬಳಸಿದರೆ ಪ್ರತಿ ಸಾವಿರ ಲೀಟರ್ ಗೆ 16.80 ರೂ., 10 ಸಾವಿರ ಮೇಲ್ಪಟ್ಟು, 20ಸಾವಿರದೊಳಗೆ ಬಳಕೆದಾರರಿಗೆ 21.60 ರೂ, 20 ಸಾವಿರ ಮೇಲ್ಪಟ್ಟು ಮತ್ತು 30ಸಾವಿರ ಒಳಗಿನ ಬಳಕೆಗೆ 26.40 ಹಾಗೂ 30ಸಾವಿರ ಮೇಲ್ಟಟ್ಟು ಬಳಕೆಗೆ 31.20 ರೂ. ನಿಗಧಿಪಡಿಸಲಾಗಿದೆ.

ವಾಣಿಜ್ಯ, ಕೈಗಾರಿಕೆ ಬಳಕೆ(ಶುದ್ಧೀಕರಿಸಿದ ನೀರು)

palike-household(Non-domestic)-Commercial-industrial-consumption-water-rates-Increase-effective-January 01 ...!

10ಸಾವಿರ ಲೀಟರ್ ಬಳಕೆಗೆ 33.60 ರೂ., 10 ಸಾವಿರ ಲೀಟರ್ ಮೇಲ್ಪಟ್ಟು-20ಸಾವಿರ ಒಳಗಿನ ಬಳಕೆಗೆ 43.20 ರೂ., 20ಸಾವಿರ ಮೇಲ್ಟಟ್ಟು, 30ಸಾವಿರ ಒಳಪಟ್ಟ ನೀರು ಬಳಕೆಗೆ 52.80 ರೂ., 30ಸಾವಿರ ಲೀಟರ್ ಮೇಲ್ಟಟ್ಟು ಬಳಕೆಗೆ 62.40 ರೂ., ದರ ನಿಗದಿಪಡಿಸಲಾಗಿದೆ.

ವಾಣಿಜ್ಯ, ಕೈಗಾರಿಕೆ ಬಳಕೆ(ಕಚ್ಚಾನೀರು)

8ಸಾವಿರ ಲೀಟರ್ ಒಳಪಟ್ಟು ಬಳಕೆಗೆ 30 ರೂ., 15 ಸಾವಿರ ಲೀಟರ್  ಮೇಲ್ಟಟ್ಟು-25ಸಾವಿರ ಒಳಗಿನ ಬಳಕೆಗೆ 40 ರೂ., 25ಸಾವಿರ ಲೀಟರ್ ಮೇಲ್ಪಟ್ಟು ಬಳಕೆಗೆ 50 ರೂ. ನಿಗಧಿಪಡಿಸಲಾಗಿದೆ.

ಪಾಲಿಕೆಯ ಒಳಚರಂಡಿ ಸಂಪರ್ಕ ಹೊಂದಿರುವ ಆವರಣಕ್ಕೆ ಒಳಚರಂಡಿ ಶುಲ್ಕವನ್ನು ನೀರಿನ ಶುಲ್ಕದ 30ರಂತೆ ಹೆಚ್ಚುವರಿಯಾಗಿ ವಿಧಿಸುತ್ತಿರುವುದನ್ನು ಮತ್ತು ಸಂಪರ್ಕದ ಸೇವಾ ಶುಲ್ಕದ ದರಗಳನ್ನು ಯಥಾಸ್ಥಿತಿ ಮುಂದುವರಿಸಲಾಗುವುದು.

ನೀರನ್ನು ಮಿತವಾಗಿ ಬಳಸಲು ಮತ್ತು ನೀರಿನ ಬಿಲ್ಲನ್ನು ನಿಗಧಿತ ಅವಧಿ ಒಳಗಡೆ ಪಾವತಿಸಬೇಕು. ಮೀಟರ್ ದುರಸ್ಥಿಯಲ್ಲಿರುವ ಅಥವಾ ಮೀಟರ್ ಇಲ್ಲದಿರುವ ಸಂಪರ್ಕಗಳ ಕುರಿತು ತಕ್ಷಣಕ್ಕೆ ಇಲಾಖೆ ಗಮನಕ್ಕೆ ತಂದು ದುರಸ್ಥಿಪಡಿಸಿಕೊಳ್ಳುವಂತೆ ಪಾಲಿಕೆಯ ಆಯುಕ್ತ ಗುರುದತ್ ಹೆಗಡೆ ತಿಳಿಸಿದ್ದಾರೆ.

key words : palike-household(Non-domestic)-Commercial-industrial-consumption-water-rates-Increase-effective-January 01 …!