ರಾಜ್ಯದ ಎಲ್ಲ ಪತ್ರಕರ್ತರಿಗೆ ಒಂದೇ ವೇದಿಕೆಯಡಿ ಮಾಹಿತಿ ನೀಡಲು ವೇದಿಕೆ ಸೃಷ್ಟಿಸಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಪಿ.ಮಣಿವಣ್ಣನ್

Promotion

ಬೆಂಗಳೂರು, ನವೆಂಬರ್ 29, 2019 (www.justkannada.in): ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕ ಪತ್ರಕರ್ತರಿಗೆ ಸಿಗುವ ಎಲ್ಲ ಮಾಹಿತಿ ಮತ್ತಷ್ಟು ಸುಲಭವಾಗಿ ದೊರಕಲಿವೆ.

ಹೌದು. ಪ್ರಸ್ತುತ ವಾಟ್ಸಾಪ್ ಹಾಗೂ ಇ ಮೇಲ್ ಮೂಲಕ ದೊರೆಯುತ್ತಿದ್ದ ಎಲ್ಲ ಮಾಹಿತಿ ಇನ್ಮುಂದೆ ಸುಲಭವಾಗಿ ಟೆಲಿಗ್ರಾಂ ಆ್ಯಪ್ ಮೂಲಕ ಇನ್ನು ಸುಲಭವಾಗಿ ದೊರಕುವಂತೆ ಮಾಡಿದ್ದಾರೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಪಿ.ಮಣಿವಣ್ಣನ್.

ಇದಕ್ಕಾಗಿ ಟೆಲಿಗ್ರಾಂ ಆ್ಯಪ್ ನಲ್ಲಿ ಒಂದು ಗ್ರೂಪ್ ರಚಿಸಿದ್ದು, ಇದರ ಮೂಲಕ ಒಂದೇ ವೇದಿಕೆಯಡಿ ದೊರಕುವಂತೆ ಮಾಡಿದ್ದಾರೆ. ಈ ಮೂಲಕ ರಾಜ್ಯದ ರಾಜ್ಯದ ಎಲ್ಲ ಪರ್ತಕರ್ತರಿಗೆ ಒಂದೇ ವೇದಿಕೆಯಡಿ ಮಾಹಿತಿ ದೊರೆಯುವಂತೆ ಮಾಡಿದ್ದಾರೆ. ಈ ಗ್ರೂಪ್’ಗೆ 10 ಸಾವಿರ ಸದಸ್ಯರ ವರೆಗೆ ಸೇರ್ಪಡೆ ಮಾಡಲು ಅವಕಾಶವಿದೆ. ಹೀಗಾಗಿ ರಾಜ್ಯದ ಎಲ್ಲ ಪತ್ರಕರ್ತರು ಈ ಗ್ರೂಪ್ ನಲ್ಲಿ ಸೇರಿಕೊಳ್ಳಬಹುದಾಗಿದೆ.

ಪತ್ರಕರ್ತರು ಈ ಲಿಂಕ್ ಬಳಸಿ ಗ್ರೂಪ್’ಗೆ ಸೇರ್ಪಡೆಯಾಗಬಹುದು: http://t.me/joinchat/LIXAU1GZS3eFvhTt7TwvPg