ರಸಗೊಬ್ಬರ, ಅಡುಗೆ ತೈಲದ ವಿಚಾರದಲ್ಲಿ ಭಾರತ ಸ್ವಾವಲಂಬಿಯಾಗುವುದು ನಮ್ಮ ಗುರಿ- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ.

Promotion

ಮೈಸೂರು,ಮೇ,20,2022(www.justkannada.in): ರಸಗೊಬ್ಬರ, ಅಡುಗೆ ತೈಲದ ವಿಚಾರದಲ್ಲಿ ಭಾರತ ಸ್ವಾವಲಂಬಿಯಾಗುವುದು ನಮ್ಮ ಗುರಿಯಾಗಿದೆ ಎಂದು  ಕೇಂದ್ರ ಕೃಷಿ ಸಚಿವೆ ಶೋಭಾ ಕರದ್ಲಾಂಜೆ ತಿಳಿಸಿದರು.

ಮೈಸೂರಿನಲ್ಲಿ‌ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಕೃಷಿ ಸಚಿವೆ ಶೋಭಾ ಕರದ್ಲಾಂಜೆ, ನಮ್ಮ ದೇಶ ಕೃಷ ಆಧಾರಿತ ಕ್ಷೇತ್ರ. ನಮ್ಮ ದೇಶದಲ್ಲಿ 90ರಷ್ಟು ಸಣ್ಣ ಹಾಗೂ ಮಧ್ಯಮ ಕೃಷಿಕರಿದ್ದಾರೆ. ಇಡೀ ದೇಶದಲ್ಲಿ ನಗರಕ್ಕೆ ಹತ್ತಿರವಿರುವ ಭೂಮಿ ಸೈಟ್ ಗಳಾಗುತ್ತಿದೆ. ಸಣ್ಣ ಹಾಗೂ ಮಧ್ಯಮ ಕೃಷಿಕರನ್ನ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಸಂಘಗಳನ್ನ ಮಾಡಿದೆ. ಕೇಂದ್ರ ಸರ್ಕಾರ ವರ್ಷಕ್ಕೆ 6 ಸಾವಿರ ಹಣವನ್ನ ರೈತರಿಗೆ ನೇರವಾಗಿ ಅವರ ಅಕೌಂಟ್ ಗೆ ಹಾಕುತ್ತಿದೆ. ಹಿಂದೆ ಎತ್ತಿನ ಜೋಡಿ ಹಾಗೂ ಕೋಣದ ಜೋಡಿ ನೋಡುತ್ತಿದ್ಧೇವೆ. ಇಂದು ಎತ್ತುಗಳನ್ನ ಸಾಕಲು ಕಷ್ಟವಾಗುತ್ತಿದೆ ಎಂದರು.

ಗುಣಮಟ್ಟಕ್ಕೆ ಬೀಜ ನೀಡಲು ವಿಶೇಷ ಕಾನೂನು ತರುತ್ತಿದ್ದೇವೆ.ಪೋಟ್ಯಾಶ್ ಪ್ರತಿ ವರ್ಷ ಕಡಿಮೆ ಸಿಗುತ್ತಿದೆ. ಕೊರೋನಾ ಕಾರಣದಿಂದ ಪೋಟಾಶ್ ಈ ವರ್ಷ ಕಡಿಮೆ ಸಿಕ್ಕಿದೆ. ನಮ್ಮ ಗುರಿ ಮುಂದಿನ ಎರಡು ವರ್ಷಗಳಲ್ಲಿ ರಸಗೊಬ್ಬರದಲ್ಲಿ ಸ್ವಾವಲಂಬನೆಯಾಗಬೇಕೆಂಬುದು. ಅತಿ ಹೆಚ್ಚು ಹಣ್ಣು ತರಕಾರಿಗಳನ್ನ ಬೆಳೆಯುತ್ತಿದ್ದೇವೆ. ಭಾರತದ ಕನಸು ಕೃಷಿ ಉತ್ಪನ್ನಗಳ ದೇಶಗಳ ಪೈಕಿ ನಮ್ಮ 10 ಸ್ಥಾನದೊಳಗೆ ಬರಬೇಕು. ಈ ಭಾರಿ 9ನೇ ಸ್ಥಾ‌ನಕ್ಕೆ ಬಂದು ನಿಲ್ಲುವ ವಿಶ್ವಾಸವಿದೆ. ಕೃಷಿ ಪಾಲು ಜಿ.ಡಿ.ಪಿಯಲ್ಲಿ ಶೇ 22.5 ರಷ್ಟಿದೆ. ಕರೋನಾ ಸಂಕಷ್ಟ ಕಾಲದಲ್ಲಿ ಬೇರೆ ದೇಶಗಳಿಗೆ ಆಹಾರವನ್ನ ರಫ್ತು ಮಾಡಿದೆ. ಕಳೆದ ವರ್ಷ ಉತ್ತರಖಾಂಡ ರಾಜ್ಯ ಸಿರಿಧಾನ್ಯವನ್ನ ಅತಿ ಹೆಚ್ಚಾಗಿ ರಫ್ತು ಮಾಡಿದೆ. ನಮ್ಮ ಉದ್ದೇಶ ಕೇವಲ ಕೃಷಿ ಮಾಡುವುದಲ್ಲ. ಅದನ್ನ ಮಾರಾಟ ಮಾಡುವುದನ್ನ ಕಲಿಸುವುದು ನಮ್ಮ‌ ಉದ್ದೇಶ ಎಂದು ಕೇಂದ್ರ ಸಚಿವೆ ಶೋಭಾ ಕರದ್ಲಾಂಜೆ ತಿಳಿಸಿದರು.

ನೀವು ತಿನ್ನುತ್ತಿರೊ ಸೂರ್ಯಕಾಂತಿ, ಕಡಲೆಕಾಯಿ ಎಣ್ಣೆಯಲ್ಲಿ ಸೂರ್ಯಕಾಂತಿಯೂ ಇಲ್ಲ, ಕಡಲೆ ಬೀಜವೂ ಇಲ್ಲ. ಅಡುಗೆ ತೈಲದ ವಿಚಾರದಲ್ಲಿ ಭಾರತ ಸ್ವಾವಲಂಬಿ ಆಗಬೇಕಿದೆ. ಶೇಕಡ 70ರಷ್ಟು ಎಣ್ಣೆ ವಿದೇಶದಿಂದ ಆಮದಾಗುತ್ತದೆ. ಮಲೇಷಿಯಾ ಹಾಗೂ ಇಂಡೋನೇಷ್ಯಾದಿಂದ ಫಾಮ್ ಆಯಿಲ್ ಬರುತ್ತದೆ. ಅದನ್ನ ಭಾರತದಲ್ಲಿ ರಿಫೈನರಿ ಮಾಡಿ ಬೇರೆ ಬೇರೆ ಲೇಬಲ್‌ ಅಂಟಿಸಿ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ತೈಲ ಬೆಳೆಗಳಿಗೆ ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಖಾದ್ಯ ತೈಲದ ವಿಚಾರದಲ್ಲಿ ಸ್ವಾವಲಂಬನೆ ಸಾಧಿಸುವ ಗುರಿ ಇದೆ ಎಂದು ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದರು.

Key words: Our aim – make -India- self-sufficient – fertilizer -cooking oil-Union Minister -Shobha Karandlaje.

ENGLISH SUMMARY…

Our aim is to become self-reliant in fertilizers and edible oil production: Union Minister Shobha Karandlaje
Mysuru, May 20, 2022 (www.justkannada.in): “Our aim is to make India self-reliant in fertilizers and edible oil production,” opined Union Minister Shobha Karandlaje.
She addressed a press meet in Mysuru today. “Ours is an agricultural country. Ninety percent of our farmers are small and secondary level farmers. Several agricultural fields that are located nearby to towns and cities in our country are rapidly converting into sites. The Union Government has formed several unions keeping in mind the small and secondary level farmers. A sum of Rs. 6,000 is being directly paid to the bank accounts of farmers every year. We have all seen bullock pairs and oxen earlier. But today farmers are finding it difficult even to look after the bullocks,” she said.
“There is no sunflower or peanut in the edible oils that are you consuming. India should become self-reliant in production of edible oils. As of now we are importing 70% of the edible oil for our needs. Majority of the palm oil comes from Malaysia and Indonesia. It is refined and sold under different brand names. Hence, the Union Government is encouraging production of oil seeds and crops. We have aim to achieve self-reliance in the area of edible oil production,” she added.
Keywords: Union Minister Shobha Karandlaje/ edible oil/ self-reliance