ಸಂಘಟನೆ ಮೀರಿ ಯಾರಾದ್ರೂ ಹೋದ್ರೆ ಅವರು ನಾಶವಾಗ್ತಾರೆ- ಸಿಎಂ ಬಿಎಸ್ ವೈಗೆ ಟಾಂಗ್ ಕೊಟ್ಟ ಸಚಿವ ಕೆ.ಎಸ್ ಈಶ್ವರಪ್ಪ…

Promotion

ಶಿವಮೊಗ್ಗ ,ಸೆ, 28,2019(www.justkannada.in): ಪಕ್ಷವನ್ನು ಮೀರಿ ಯಾರಾದರೂ ಬೆಳೆಯಲು ಹೋದರೆ ಅವರು ನಾಶವಾಗುತ್ತಾರೆ ಎಂದು ಸಿಎಂ ಬಿಎಸ್ ಯಡಿಯೂರಪ್ಪಗೆ  ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಟಾಂಗ್ ನೀಡಿದರು.

ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ,  ಸಂಘಟನೆ ಮೀರಿ ಬೆಳೆಯಲು ಹೋದವರಿಗೆ ತಾತ್ಕಾಲಿಕ ಯಶಸ್ಸು ಸಿಗುತ್ತದೆ.  ಸಂಘಟನೆ ಮೀರಿ ಬೆಳೆಯಲು ಹೋದವರು ನಾಶವಾಗುತ್ತಾರೆ. ಇದು ಕಾಂಗ್ರೆಸ್ ನ  ಸಿದ್ದರಾಮಯ್ಯ, ಬಿಜೆಪಿಯ ಬಿಎಸ್ ಯಡಿಯೂರಪ್ಪ, ಜೆಡಿಎಸ್ ನ ಹೆಚ್,ಡಿ ಕುಮಾರಸ್ವಾಮಿಗೂ ಅನ್ವಯವಾಗುತ್ತದೆ ಎಂದು ಹೇಳಿದರು.

ಬಿಎಸ್ ಯಡಿಯೂರಪ್ಪ ಬಿಜೆಪಿ ಬಿಟ್ಟು ಬೇರೆ ಪಕ್ಷ ಕಟ್ಟಿ ಮೂರು ಸೀಟು ಗೆದ್ದರು. ಸಂಘಟನೆ ಮೀರಿ ಸಿದ್ಧರಾಮಯ್ಯ ನಡೆದುಕೊಂಡರು. ತಾವೇ ಬೆಳೆದರು ವಿನಃ, ಪಕ್ಷವನ್ನು ಸಂಘಟಿಸಲೇ ಇಲ್ಲ.  ಹೀಗಾಗಿ ಕಾಂಗ್ರೆಸ್ ನಿರ್ನಾಮವಾಯಿತು. ಪಕ್ಷಕ್ಕಿಂತ ದೊಡ್ಡವರಾಗಲು ಸಾಧ್ಯವಿಲ್ಲ. ಒಂದು ವೇಳೆ ಪಕ್ಷ ಮೀರಿ ಬೆಳೆಯಲು ಹೋದರೆ ಅವರು ನಾಶವಾಗಿ ಹೋಗುತ್ತಾರೆ ಎಂದು ಈಶ್ವರಪ್ಪ ನೇರವಾಗಿಯೇ ಟಾಂಗ್ ನೀಡಿದರು.

Key words: organization – destroyed –minister- KS Eshwarappa-tong-CM BS Yeddyurappa